ಭಟ್ಕಳ: ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಭಟ್ಕಳ ತಾಲೂಕಿನ ಪಂಚಾಯತ ರಾಜ್ ಇಲಾಖೆ ನೌಕರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯ ಮುಂಬಡ್ತಿ ಕೋಟಾವನ್ನು ಶೇ.50 ಕ್ಕೆ ಹೆಚ್ಚಿಸುವುದು, ಗ್ರೇಡ್-2 ಕಾರ್ಯದರ್ಶಿ ಮತ್ತು ದ್ವಿ.ದ. ಲೆಕ್ಕ ಸಹಾಯಕರ ಮುಂಬಡ್ತಿ ಕೋಟಾ ಶೇ.50 ಮೂಲಕ 3:2 ಅನುಪಾತದಲ್ಲಿ ಮುಂಬಡ್ತಿ ನೀಡುವುದು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ರಾಜ್ಯ ವೃಂದ ಕೈಬಿಟ್ಟು ಜಿಲ್ಲಾ ವೃಂದವೆಂದು ಪರಿಗಣಿಸುವಂತೆ ಭಟ್ಕಳ ತಾಲೂಕಿನ ಪಂಚಾಯತ ರಾಜ್ ಇಲಾಖೆ ನೌಕರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಿಂಚಿದ ಭಟ್ಕಳದ ತಿರುಮಲ ನಾಯ್ಕ
ಅವರು ಇತ್ತಿಚೆಗೆ ಭಟ್ಕಳ ತಾಲೂಕ ಪಂಚಾಯತದಲ್ಲಿ ಸಭೆ ಸೇರಿ ದಿ:27-02-2024 ರಂತೆ ಅಧಿಸೂಚನೆ ಹೊರಡಿಸಿ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿಗೆ ಆಕ್ಷೇಪಣೆಗೆ ಆಹ್ವಾನಿಸಿದ್ದರನ್ವಯ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ತಮ್ಮ ಆಕ್ಷೇಪಣೆ ಮನವಿಯನ್ನು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ.
ಈ ವಿಡಿಯೋ ನೋಡಿ : https://fb.watch/qEo3133QEs/?mibextid=Nif5oz
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ವ್ಯವಸ್ಥಾಪಕಿ ಲತಾ ನಾಯ್ಕ (ಪ್ರಭಾರ), ಸಹಾಯಕ ನಿರ್ದೇಶಕ ಉದಯ ಡಿ. ಬೋರಕರ್ ನೌಕರರ ಪ್ರಮುಖ ಬೇಡಿಕೆಗಳ ಮನವಿ ಸ್ವೀಕರಿಸಿದರು. ಸಕಾಲದಲ್ಲಿ ಸರ್ಕಾರಕ್ಕೆ ತಮ್ಮ ಅಹವಾಲನ್ನು ತಲುಪಿಸುವುದಾಗಿ ತಿಳಿಸಿದರು.
ನಿಯೋಗದಲ್ಲಿ ಕರಿಯಪ್ಪ ನಾಯ್ಕ, ರಾಘವೇಂದ್ರ ಪೂಜಾರಿ, ಮಹಿಮಾ ನಾಯ್ಕ, ಮಂಜುನಾಥ ಶೆಟ್ಟಿಮನೆ, ಲಲಿತಾ ಪಟಗಾರ, ಉದಯ ಖಾರ್ವಿ, ನಾರಾಯಣ ಗೊಂಡ, ಲಿಂಗಪ್ಪ ನಾಯ್ಕ, ಪರಶುರಾಮ ಬಂಟ, ನಾಗವೇಣಿ ನಾಯ್ಕ, ಶಂಕರ ದೇವಾಡಿಗ, ಕವಿತಾ ನಾಯ್ಕ, ವಿದ್ಯಾ ಮಠದ, ನಾಗಪ್ಪ ಗೊಂಡ ಮುಂತಾದವರು ಇದ್ದರು.