ಮುಗಳಖೋಡ: ರಾಯಬಾಗ ತಾಲೂಕು ಮುಗಳಖೋಡ ಫೋನ್ ಆಫೀಸ್ ಬಸವ ನಗರ ಹತ್ತಿರ ಜತ್ -ಜಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇಂದು ಸಂಜೆ 4:30ಕ್ಕೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳಿ ಜನರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಮೂಡಲಗಿ ತಾಲೂಕು ಗುರ್ಲಾಪುರದಿಂದ ಹಾರೂಗೇರಿ ಪಟ್ಟಣಕ್ಕೆ ಹೊರಟಿದ್ದ ಶಿಫ್ಟ್ ಕಾರ್ KA-03, AF-1009, ಹೋಂಡಾ ಶೈನ್ ಬೈಕ್ KA -48, X-9158, ಹಾಗೂ ಎಕ್ಸಲ್ ಸೂಪರ್ ಬೈಕ್ KA-49, X-9636 ಇವುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಸಿಫ್ಟ್ ಕಾರ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬೈಕ್ ಗಳಿಗೆ ಗುದ್ದಿಕೊಂಡು ಕಾರ್ ಪಲ್ಟಿಯಾಗಿ ಮರಕ್ಕೆ ರಭಸವಾಗಿ ಗುದ್ದಿದೆ.
ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಶಾಸಕಿ ಸಾವು
ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ(19), ಮಲ್ಲಿಕಾರ್ಜುನ ರಾಮಪ್ಪ ಮರಾಠೆ(16), ಆಕಾಶ ರಾಮಪ್ಪ ಮರಾಠೆ(14), ಸಿಫ್ಟ್ ಕಾರ್ಡಿಯ ಡ್ರೈವರ್ ಏಕನಾಥ ಭೀಮಪ್ಪ ಪಡತರೆ(22), ಮುಗಳಖೋಡ ಪಟ್ಟಣದ ಎಕ್ಸೆಲ್ ಸೂಪರ್ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ(48) ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ ಹಣಮಂತ ಮಾಳಪ್ಪ ಮಳ್ಯಾಗೋಳ(42), ಬಾಲನಂದ ಪರಸಪ್ಪ ಮಾಳಗಿ(37) ಮೃತಪಟ್ಟಿದ್ದಾರೆ. ಗೋಕಾಕದ ಪಟ್ಟಣದ ನಿವಾಸಿ ಹೋಂಡಾ ಶೈನ್ ಬೈಕ್ ಸವಾರ ಬಾಲಾನಂದ ಪರಪ್ಪ ಮಾಳಗೆ ಹಾರೂಗೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಈ ವಿಡಿಯೋ ನೋಡಿ : ನಾಮಧಾರಿ ಪ್ರೀಮಿಯರ್ ಲೀಗ್ ಉದ್ಘಾಟನೆ https://fb.watch/qotTv2lfb5/?mibextid=Nif5oz
ಘಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾರೋಗೇರಿ ಸಿಪಿಐ ರವಿಚಂದ್ರನ್ ಬಡಪಕಿರಪ್ಪನವರ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಎಎಸ್ಐ ಎಸ್.ಎಲ್.ಬಾಡಕರ, ಅಶೋಕ ಶಾಂಡಗೆ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.