ಭಟ್ಕಳ : ಹಳೇ ಬಸ್ ನಿಲ್ದಾಣ ಬಳಿ ಮಲಗಿದ್ದಲ್ಲಿಯೇ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಆಶ್ರಯ ಬಡಾವಣೆ ನಿವಾಸಿ ರೆಹಮತುಲ್ಲಾ ಬಹಾದ್ದೂರಸಾಬ್(೬೫) ಮೃತ ವ್ಯಕ್ತಿ. ಈತ ಭಟ್ಕಳಕ್ಕೆ ಭಿಕ್ಷೆ ಬೇಡುವ ಸಲುವಾಗಿ ಬಂದವನು ಎಂದು ತಿಳಿದುಬಂದಿದೆ. ಜು.೩ರಂದು ಸಾಯಂಕಾಲ ೫ ಗಂಟೆಗೆ ಭಟ್ಕಳ ಹಳೇ ಬಸ್ ನಿಲ್ದಾಣ ಬಳಿ ಶ್ರೀ ಬೃಂದಾವನ ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಎದುರುಗಡೆ ಅಸ್ವಸ್ಥನಾಗಿ ಮಲಗಿಕೊಂಡಿದ್ದ. ಜುಲೈ ೪ರ ಬೆಳಿಗ್ಗೆ ೯ ಗಂಟೆಯ ನಡುವಿನ ಅವಧಿಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ : ವನಮಹೋತ್ಸವ ಕಾರ್ಯಕ್ರಮಕ್ಕೆ ಪತ್ರಕರ್ತರೊಡಗೂಡಿ ಚಾಲನೆ

ಯಾವುದೋ ಕಾಯಿಲೆಯಿಂದ ಅಥವಾ ವಯೋ ಸಹಜದಿಂದ ಮೃತ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಭಟ್ಕಳದ ತಲಾಂದ ನಿವಾಸಿ, ಗೂಡ್ಸ್ ಆಟೋ ಚಾಲಕ ಪದ್ಮಯ್ಯಾ ಭೈರಾ ದೇವಾಡಿಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.