ಟೈಲರ್‌ನ ಮಗಳು ಅಕ್ಷತಾ ನಾಯ್ಕ ಹುಬ್ಬಳ್ಳಿಯ ಕೆಎಲ್ಇಐಟಿ ವಿದ್ಯಾರ್ಥಿ

ಭಟ್ಕಳ : ನಿನ್ನೆ ಬೆಳಗಾವಿಯಲ್ಲಿ ನಡೆದ ವಿಟಿಯು 23 ನೇ ಘಟಿಕೋತ್ಸವದಲ್ಲಿ ಮುರುಡೇಶ್ವರ ಮೂಲದ ಅಕ್ಷತಾ ನಾಯ್ಕ ಅವರಿಗೆ ಮೂರು ಚಿನ್ನದ ಪದಕ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ : ಜಿಲ್ಲಾ ಮಟ್ಟದ ರಸಪ್ರಶ್ನೆಯಲ್ಲಿ ಕುಮಟಾದ ಅನುರಾಧ ದ್ವಿತೀಯ
ಹುಬ್ಬಳ್ಳಿಯ ಕೆಎಲ್‌ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷತಾ ನಾಯ್ಕ ಅವರಿಗೆ ಎಂಸಿಎನಲ್ಲಿ ಮೂರು ಚಿನ್ನದ ಪದಕ ಸಿಕ್ಕಿವೆ. ಮೂಲತಃ ಮುರ್ಡೇಶ್ವರದವರಾದ ಈ ಕುಟುಂಬ ಹುಬ್ಬಳ್ಳಿಯಲ್ಲಿಯೇ ನೆಲೆಸಿದೆ. ತಂದೆ ಶ್ರೀಧರ ನಾಯ್ಕ ಟೈಲರ್ ಉದ್ಯೋಗ ಮಾಡುತ್ತಿದ್ದಾರೆ. ತಾಯಿ ರಾಜೇಶ್ವರಿ ನಾಯ್ಕ ಗೃಹಿಣಿ. ತಂಗಿ ಬಿಕಾಂ ಓದುತ್ತಿದ್ದು, ತಮ್ಮ7ನೇ ತರಗತಿ ಓದುತ್ತಿದ್ದಾನೆ.

ಇದನ್ನೂ ಓದಿ : ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ ತೆಂಗಿನಗುಂಡಿಯ ತಿರುಮಲ ನಾಯ್ಕ  https://www.facebook.com/share/p/WxyqsU95CL5zigKN/?mibextid=Nif5oz

ಸದ್ಯ ಬೆಂಗಳೂರಿನಲ್ಲಿ ಅಕ್ಷತಾ ಸಾಫ್ಟ್‌ವೇರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿರಂತರ ಓದು ಹಾಗೂ ಓದಿದ್ದನ್ನು ಮನನ ಮಾಡಿಕೊಳ್ಳುತ್ತಿದ್ದೆ. ಮೂರು ಬಂಗಾರ ಪಡೆದಿರುವುದು ಖುಷಿ ತಂದಿದೆ ಎಂದು ಅಕ್ಷತಾ ಪ್ರತಿಕ್ರಿಯಿಸಿದ್ದಾರೆ.


ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ (ಮಾ.೦೭) ನಡೆದ ವಿಟಿಯು ೨೩ನೇ ಘಟಿಕೋತ್ಸವ ಭಾಗ -೨ ರ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.
ರಾಮನ್ಸ್ ಮ್ಯಾಗ್ನಸೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸೆಲ್ಕೋ ಪೌಂಡೇಶನ್ ಹಾಗೂ ಸೆಲ್ಕೋ ಇಂಡಿಯಾ ಸಹ ಸಂಸ್ಥಾಪಕ ಡಾ. ಹರೀಶ ಹಂದೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಟಿ.ಎನ್ ಶ್ರೀನಿವಾಸ ಉಪಸ್ಥಿತರಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಚಿನ್ನದ ಪದಕ ಪಡೆದವರು:


ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ೪ ಚಿನ್ನದ ಪದಕ, ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷತಾ ನಾಯ್ಕ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಪೂಜಾ ತಲಾ ೩ ಚಿನ್ನದ ಪದಕ, ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರಾಂತಿ ಮೋರೆ, ಚಿಕ್ಕಮಗಳೂರಿನ ಆದಿಚುಂಚನ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಪಿ.ಚೇತನ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎ.ಎಸ್.ನಿತ್ಯಾ ಅವರಿಗೆ ತಲಾ ೨ ಚಿನ್ನದ ಪದಕ ವಿತರಿಸಲಾಯಿತು.

ಘಟಿಕೋತ್ಸವದಲ್ಲಿ ಒಟ್ಟು ೪,೫೧೪ ಎಂಬಿಎ, ೪,೦೨೪ ಎಂಸಿಎ, ೯೨೦ ಎಂ.ಟೆಕ್, ೪೪ ಎಂ.ಆರ್ಚ್, ೨೭ ಎಂ.ಪ್ಲ್ಯಾನ್ ಪದವಿ ನೀಡಲಾಯಿತು. ಪಿಎಚ್.ಡಿ–೬೬೭, ಎಂ.ಎಸ್ಸಿ ಎಂಜಿನಿಯರಿಂಗ್ ಬೈ ರಿಸರ್ಚ್–೨, ಇಂಟಿಗ್ರೇಟೆಡ್ ಡ್ಯುಯೆಲ್ ಡಿಗ್ರಿ ಟು ರಿಸರ್ಚ್–೨ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು.