ಭಟ್ಕಳ: ಮೀನುಗಾರಿಕೆಗೆ (fishing) ತೆರಳಿದ ದೋಣಿಯೊಂದು ಅರಬ್ಬಿ ಸಮುದ್ರದಲ್ಲಿ (Arabian sea) ಅಲೆಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರು ನಾಪತ್ತೆಯಾಗಿದ್ದು (fishermen missing), ಇಬ್ಬರನ್ನು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೀನುಗಾರನನ್ನು ದೋಣಿ ಮಾಲೀಕ ಮನೋಹರ ಮೊಗೇರ ಹಾಗೂ ಬೆಳ್ನಿ ಮೂಲದ ರಾಮ ಖಾರ್ವಿ ರಕ್ಷಿಸಲ್ಪಟ್ಟವರು. ನಾಪತ್ತೆಯಾದ ಮೀನುಗಾರರನ್ನು ರಾಮಕೃಷ್ಣ ಮೊಗೇರ, ಸತೀಶ ಮೊಗೇರ, ಗಣೇಶ ಮೊಗೇರ, ನಿಶ್ಚಿತ ಮೊಗೇರ ಎಂದು ಮೂಲಗಳಿಂದ ತಿಳಿದು ಬಂದಿದೆ (fishermen missing).
ಇದನ್ನು ಓದಿ: Bike Accident/ ಬಸ್ತಿಮಕ್ಕಿ ಕ್ರಾಸ್ ಬಳಿ ಅಪಘಾತ: ಬೈಕ್ ಸವಾರ ಗಂಭೀರ
ಈ ಆರ್ವರು ಬುಧವಾರ ಮಧ್ಯಾಹ್ನ ಅಳ್ವೆಕೋಡಿ ಬಂದರ ಮೂಲಕ ಮಹಾಸತಿ ಗಿಲ್ನಟ್ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರದ ಅಲೆಗೆ ಸಿಲುಕಿ ದೋಣಿ ಮುಳುಗಡೆಯಾಗಿದೆ. ಈ ವೇಳೆ ರಕ್ಷಿಸಲ್ಪಟ್ಟ ಇಬ್ಬರನ್ನು ಕರಾವಳಿ ಪಡೆ ಪಿಎಸ್ಐ ವೀಣಾ ಚಿತ್ರಾಪುರ ತಮ್ಮ ವಾಹನದ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದ್ದಾರೆ.
ಇದನ್ನು ಓದಿ: Bike theft/ ಬೈಕ್ ಕದ್ದು ಬೆಂಕಿ ಹಚ್ಚಿದ ದುರುಳರು



