ಭಟ್ಕಳ : ಅಂಗಡಿ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದ್ದನ್ನು ತೆಗೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ವ್ಯಾಪಾರಿ ಜೀವ ಬೆದರಿಕೆ ಹಾಕಿದ ಘಟನೆ ಇಂದು(ಏ.೯) ನಗರದಲ್ಲಿ ನಡೆದಿದೆ.

ಇದನ್ನೂ ಓದಿ : ಕೊಲ್ಲೂರು ಪುಣ್ಯಕ್ಷೇತ್ರದ ಮಾಹಿತಿ ಕೇಳಿದ ಪ್ರಧಾನಿ ಕಚೇರಿ

ಭಟ್ಕಳದ ಹಿಂದೂ ಕಾಲೋನಿಯ ಮಹಮ್ಮದ್ ಸಾದಿಕ್(೪೮) ವಿರುದ್ಧ ಮಾರುಕೇರಿಯ ಶಿಲ್ಪಾ ವಿಜಯ ಹಸ್ಲರ್(೨೭) ದೂರು ದಾಖಲಿಸಿದ್ದಾರೆ. ನಗರದ ಮುಖ್ಯ ರಸ್ತೆಯಲ್ಲಿ ಇರುವ ಅಟಕೆರೆ ಅಂಗಡಿ ಎದುರು ಘಟನೆ ನಡೆದಿದೆ. ನಗರ ಠಾಣೆಯಲ್ಲಿ ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪ್ರಕರಣ ಏನು?
ಏ.೯ರಂದು ಬೆಳಿಗ್ಗೆ ಶಿಲ್ಪಾ ವಿಜಯ್ ಹಸ್ಮರ್ ತಮ್ಮ ಸ್ಕೂಟಿ ವಾಹನವನ್ನು ಭಟ್ಕಳದ ಮಾರಿಕಟ್ಟಾ ಹತ್ತಿರ ಆಟಕೇರಿ ಬಟ್ಟೆ ಅಂಗಡಿ ಎದುರು ನಿಲ್ಲಿಸಿದ್ದರು. ಬಂಗಾರದ ಅಂಗಡಿಗೆ ಹೋಗಿ ವಾಪಸ್ ಬಂದಾಗ ಮಧ್ಯಾಹ್ನ 12 ಗಂಟೆಗೆ ಅಲ್ಲಿ ಅವರ ವಾಹನ ಇರಲಿಲ್ಲ. ಆಗ ಅಲ್ಲೇ ಇದ್ದ ಮಹಮ್ಮದ್ ಸಾದಿಕ್ ಅವರಿಗೆ ತನ್ನ ಗಾಡಿಯನ್ನು ತೆಗೆದು ರಸ್ತೆಯಲ್ಲಿ ಇಟ್ಟವರು ಯಾರು ಅಂತಾ ಕೇಳಿದ್ದಾರೆ. ಅದಕ್ಕೆ ಸಾದಿಕ್, ನಿನ್ನ ಗಾಡಿಯನ್ನು ರಸ್ತೆಗೆ ಇಟ್ಟಿದ್ದು ನಾನೇ. ಇಲ್ಲಿ ಗಾಡಿ ನಿಲ್ಲಿಸಲಿಕ್ಕೆ ನಿನ್ನ ಅಪ್ಪನ ಅಂಗಡಿ ಅಂತಾ ಕೇಳಿದ್ದಾರೆ. ನಿನ್ನನ್ನು ಈ ಅಂಗಡಿಯ ಒಳಗೆ ಹಾಕಿ ಏನು ಮಾಡಬೇಕು ಅಂತಾ ಗೊತ್ತಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಶಿಲ್ಪಾ ಹಸ್ಲರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.