ಭಟ್ಕಳ: ರಮಜಾನ್ ಉಪವಾಸದ ವೇಳೆ ವಿದ್ಯುತ್ ಕಡಿತಗೊಳಿಸದಂತೆ ಮಜ್ಜಿಸೆ ಇಸ್ಲಾಹ ವ ತಂಝೀಮ್, ವತಿಯಿಂದ ಭಟ್ಕಳ ಹೆಸ್ಕಾಂ ಸಹಾಯಕ ಅಭಿಯಂತರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಏ.೧೭ರಂದು

ಪವಿತ್ರ ರಮಜಾನ್ ಮಾಸ ಮುಕ್ತಾಯದ ಹಂತದಲ್ಲಿದ್ದು ಇನ್ನೇನು ನಾಲೈದು ದಿನಗಳಲ್ಲಿ ಈದುಲ್ ಫಿತ್ರ ಹಬ್ಬ ಬರಲಿದೆ. ಭಟ್ಕಳದಲ್ಲಿ ಹೆಚ್ಚುತ್ತಿರುವ ಬಿಸಿಲು ಒಂದೆಡೆಯಾದರೆ ಪವಿತ್ರ ರಮಜಾನ್ ತಿಂಗಳ ಉಪವಾಸ ಆಚರಿಸುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಪದೇ ಪದೇ ವಿದ್ಯುತ್ ಕಡಿತವು ಬಹಳಷ್ಟು ತೊಂದರೆ ನೀಡುತ್ತಿದೆ. ತಾವು ಆದಷ್ಟು ಹೆಚ್ಚಿನ ಗಮನ ನೀಡುವುದರ ಮೂಲಕ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಹಬ್ಬ ಸಮೀಪ ಇರುವುದರಿಂದ ನಿತ್ಯವೂ ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಕಾರಣ ತಾವು ಈ ಮುಂದಿನ ಕೆಲ ದಿನಗಳವರೆಗೆ ಯಾವುದೇ ಕಾರಣಕ್ಕೂ ತಾಂತ್ರಿಕ ಸಮಸ್ಯೆ ಹೊರತು ಪಡಿಸಿ ವಿದ್ಯುತ್ ಕಡಿತಗೊಳಿಸದಂತೆ ಜಾಗ್ರತೆ ವಹಿಸಬೇಕು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ಸಂದರ್ಭದಲ್ಲಿ ಮಜ್ಜಿಸೆ ಇಸ್ಲಾಹ ವ ತಂಝೀಮ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ , ಅತಿಕ್ ಉರ್ ರೆಹಮಾನ್ ಮುನಿರಿ ಇದ್ದರು.