ಭಟ್ಕಳ : ಲೋಕಸಭೆ ಚುನಾವಣೆಯಲ್ಲಿ  ಈ ಬಾರಿ ೭ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನಮ್ಮ ರಾಜ್ಯದಲ್ಲಿ ೨ ಹಂತದಲ್ಲಿ ನಡೆಯಲಿದೆ. ಮೂರನೇ ಹಂತದಲ್ಲಿ ಅಂದರೆ, ರಾಜ್ಯದ ೨ನೇ ಹಂತದಲ್ಲಿ ಉತ್ತರ ಕನ್ನಡ ಕ್ಷೇತ್ರದ ಚುನಾವಣೆ ನಡೆಯಲಿದೆ.

ಇದನ್ನೂ ಓದಿ : ಉ.ಕ. ಲೋಕಸಭೆ ಕ್ಷೇತ್ರದಲ್ಲಿ ಮೇ ೭ರಂದು ಮತದಾನ

ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿಯಲ್ಲಿ ಇದರ ಮಾಹಿತಿ ನೀಡಿದೆ. ಇದರ ಜೊತೆ ಮತದಾರರ ವಿವರ, ಸಿಬ್ಬಂದಿ, ಮತಗಟ್ಟೆ ಮತ್ತಿತರ ವಿಷಯಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಈ ವಿಡಿಯೋ ನೋಡಿ : ಭಟ್ಕಳದ ಬದ್ರಿಯಾ ಕಾಲೋನಿಯಲ್ಲಿ ಮನೆಗೆ ಬೆಂಕಿ  https://fb.watch/qRAjXSFkdb/?mibextid=Nif5oz

ಹಾಗಾದರೆ, ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ? ವರ್ಗವಾರು, ಲಿಂಗವಾರು ಮತದಾರರೆಷ್ಟು? ಮತ್ತಿತರ ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಒಟ್ಟು ೧೬೨೮೯೬೧ ಮತದಾರರಿದ್ದಾರೆ. ಈ ಪೈಕಿ ೮,೧೮,೦೫೫ ಪುರುಷರು, ೮೧೦೮೯೨ ಮಹಿಳೆಯರು ಮತ್ತು ೧೪ ತೃತೀಯ ಲಿಂಗಿಗಳು ಇದ್ದಾರೆ. ೪೫೪೬ ಮತದಾರರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಇದರಲ್ಲಿ ೪೪೧೪ ಪುರುಷರು ಮತ್ತು ೧೩೨ ಮಹಿಳೆಯರು ಇದ್ದಾರೆ. ೧೯೫೨೬ ಯುವಕರು, ೧೭೬೯೮ ಯುವತಿಯರು ಮತ್ತು ಇಬ್ಬರು ತೃತೀಯ ಲಿಂಗಿಗಳು ಸೇರಿ ಒಟ್ಟು ೩೭೨೨೬ ಯುವ ಮತದಾರರಿದ್ದಾರೆ.

ಹಿರಿಯರಲ್ಲಿ ಮಹಿಳೆಯರೇ ಹೆಚ್ಚು :
ಉತ್ತರ ಕನ್ನಡ ಕ್ಷೇತ್ರದಲ್ಲಿ ೮೫ ವರ್ಷ ಮೇಲ್ಪಟ್ಟ ವಯಸ್ಸಿನ ೧೫೬೫೨ ಮತದಾರರಿದ್ದಾರೆ. ಇವರಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ೬೨೪೨ ಪುರುಷ ಮತದಾರರಿದ್ದರೆ, ೯೪೧೦ ಮಹಿಳೆಯರಿದ್ದಾರೆ.

ಇನ್ನು, ೨೪೧೧೬ ವಿಕಲಚೇತನ ಮತದಾರರಿದ್ದು, ಪುರುಷರು ೧೪೭೧೮ ಮತ್ತು ೯೩೯೮ ಮಹಿಳೆಯರಿದ್ದಾರೆ. ಇದಲ್ಲದೆ, ಮೂವರು ಪುರುಷ ಅನಿವಾಸಿ ಭಾರತೀಯರು ಮತದಾನಕ್ಕೆ ಅರ್ಹರಾಗಿದ್ದಾರೆ. ಆಶ್ಚರ್ಯವೆಂದರೆ, ರಾಜ್ಯದ ಇತರೆ ಕ್ಷೇತ್ರಗಳನ್ನು ಹೋಲಿಸಿದರೆ, ಅತಿ ಕಡಿಮೆ ಅನಿವಾಸಿ ಭಾರತೀಯ ಮತದಾರರು ಇರುವುದು ಉತ್ತರ ಕನ್ನಡದಲ್ಲಿ.