ಹೊನ್ನಾವರ : ತಾಲೂಕಿನ ಸಾಲ್ಕೋಡು ಗ್ರಾಮದ ಮುಲ್ಲೆಮಕ್ಕಿ ಸಮೀಪ ವಿದ್ಯುತ್ ಲೈನ್ ಕಿಡಿಯಿಂದ ತಗುಲಿದ ಬೆಂಕಿ ತೋಟಕ್ಕೂ ವ್ಯಾಪಿಸಿ ಹಾನಿ ಉಂಟಾದ ಘಟನೆ ಸಂಭವಿಸಿದೆ.
ಇದನ್ನೂ ಓದಿ : ನಿವೃತ್ತ ಶಿಕ್ಷಕ ಮಹಾದೇವ ನಾರಾಯಣ ಶೆಟ್ಟಿ ನಿಧನ
ಸಾಲ್ಕೋಡು ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯ್ಕ ಇವರ ತೋಟದ ಸಮೀಪದ ಅರಣ್ಯ ಪ್ರದೇಶ ಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಮಧ್ಯಾಹ್ನದ ಸಮಯದಲ್ಲಿ ವಿದ್ಯುತ್ ಲೈನ್ ಕಿಡಿಯಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ಗುಡ್ಡಕ್ಕೆ ವ್ಯಾಪಿಸಿತು. ಈ ವೇಳೆ ಬಾಲಚಂದ್ರ ನಾಯ್ಕ ಇವರ ತೋಟಕ್ಕೂ ಬೆಂಕಿ ವ್ಯಾಪಿಸಿ ನೂರಕ್ಕೂ ಅಧಿಕ ಅಡಿಕೆ, ತೆಂಗು, ಬಾಳೆಗಿಡ ಹಾಗೂ ನೀರಾವರಿಗೆ ಹಾಕಿದ ಪೈಪಲೈನ್ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ : ಮತದಾನ ಬಹಿಷ್ಕಾರ ಹಿಂಪಡೆದ ಕಾಸರಕೋಡ ಟೊಂಕ ಮೀನುಗಾರರು
ಸಾರ್ವಜನಿಕರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನಿಂದ ಪ್ರತಿ ಬಾರಿ ಇಂತಹ ಅಗ್ನಿ ಅವಘಡ ಸಂಭವಿಸುತ್ತಾ ಇದೆ. ಈ ಬಾರಿ ತೋಟದವರಿಗೂ ವ್ಯಾಪಿಸಿದೆ. ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.