ಹೊನ್ನಾವರ : ಏಪ್ರಿಲ್ 18 ರಂದು ಸಂಜೆ 6 ಗಂಟೆಗೆ ಪಟ್ಟಣದ ಬಂದರು ಪ್ರದೇಶದ ಶರಾವತಿ ನದಿ ಸಂಗಮ ಸ್ಥಳದಲ್ಲಿ ಶರಾವತಿ ಆರತಿ ಕಾರ್ಯಕ್ರಮ ನಡೆಯಲಿದೆ.
ಶರಾವತಿ ಆರತಿ ಸಮಿತಿ ನೇತೃತ್ವದಲ್ಲಿ ಶರಾವತಿ ನದಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ತಿಳಿಸಿದ್ದಾರೆ.

ಇದನ್ನೂ ಓದಿ : ಭಟ್ಕಳ ಜಾತ್ರೆಗೆ ಸಕಲ ಸಿದ್ಧತೆ

ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ನದಿ ಲಕ್ಷಾಂತರ ಕುಟುಂಬಗಳ ಜನರಿಗೆ ಜೀವನಾಧಾರ ಕಲ್ಪಿಸಿದೆ. ಕೃಷಿ, ತೋಟಗಾರಿಕೆಯಲ್ಲದೆ ಜೀವಾನಾಧಾರದ ಹಲವು ಉದ್ಯೋಗಗಳನ್ನು ನೀಡಿದೆ. ಈ ಹಿನ್ನೆಲೆ ಶರಾವತಿ ನದಿಗೆ ಕಳೆದ ಮೂರು ವರ್ಷಗಳಿಂದ ಶರಾವತಿ ಆರತಿ ಮೂಲಕ ನಮಿಸುವ ಕಾರ್ಯ ನೆರವೇರಿಸಲಾಗುತ್ತಿದೆ ಎಂದರು.

ರೀಲ್ಸ್ ನೋಡಿ : ಭಟ್ಕಳ ಜಾತ್ರೆಗೆ ಸಿದ್ಧಗೊಳ್ಳುತ್ತಿದೆ ತೇರು

ಸಮಿತಿ ಕಾರ್ಯಾಧ್ಯಕ್ಷ ಜಿ.ಜಿ.ಶಂಕರ ಮಾತನಾಡಿ, ಶರಾವತಿ ನದಿಗೆ ಆರತಿ ಬೆಳಗುವ ಮೂಲಕ ಶರಾವತಿ ನದಿಯ ಸ್ವಚ್ಛತೆಯ ಸಂದೇಶ ಸಾರಲಾಗುತ್ತದೆ. ಐವರು ವೈದಿಕರ ಮೂಲಕ ಗಂಗಾರತಿಯ ಮಾದರಿಯಲ್ಲಿ ಶರಾವತಿ ನದಿಗೆ ಆರತಿ ಬೆಳಗಿಸಲಾಗುತ್ತದೆ. ಸಂಗೀತ ವಿದ್ವಾಂಸೆ ತಾರಾ ಜಿಯು ಭಟ್ ಅವರಿಂದ ಈ ಸಂದರ್ಭದಲ್ಲಿ ಶರಾವತಿ ಕುರಿತಾಗಿ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಿತಿಯ ಜೆ.ಟಿ.ಪೈ, ಕೇಶವ ನಾಯ್ಕ ಬಳಕೂರು, ವಿಶ್ವನಾಥ ನಾಯಕ, ಎಂ.ಎಸ್.ಹೆಗಡೆ ಕಣ್ಣಿಮನೆ, ಸುರೇಶ ಹೊನ್ನಾವರ, ಶಿವರಾಜ ಮೇಸ್ತ, ಸಂಜು ಶೇಟ್, ಲಕ್ಷ್ಮಣ ಮೇಸ್ತ ಉಪಸ್ಥಿತರಿದ್ದರು.