ಭಟ್ಕಳ : ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಬೀಚ್ ಬಳಿ ಅನುಮತಿ ಇಲ್ಲದೆ ಸೋಮವಾರ ಹನುಮಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹೆಗಡೆ (ಅನಂತಕುಮಾರ ಹೆಗಡೆ) ಸೇರಿದಂತೆ 20ಕ್ಕೂ ಹೆಚ್ಚು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ತೆಂಗಿನಗುಂಡಿಯಲ್ಲಿ ಮತ್ತೆ ಹಾರಾಡಿದ ಭಗವಾಧ್ವಜ
ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು
ಸಂಸದ ಹೆಗಡೆ ಸೇರಿದಂತೆ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ದೀಪಕ ನಾಯ್ಕ, ಸುರೇಶ ಕೋಣೆಮನೆ, ರವಿ ನಾಯ್ಕ ಜಾಲಿ ಸೇರಿ ಇತರ 15ಕ್ಕೂ ಹೆಚ್ಚು ಜನರು ಇತರ ಆರೋಪಿತರಾಗಿದ್ದಾರೆ.
ವಿಡಿಯೋ ನೋಡಿ : https://fb.watch/qDGFj2Dsk1/?mibextid=Nif5oz
ಸಾರ್ವಜನಿಕ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಧ್ವಜ ಹಾರಿಸಿರುವುದು, ಗಲಭೆಗೆ ಪ್ರಚೋದನೆ ನೀಡಲು ಯತ್ನಿಸುವ ಜತೆಗೆ ಧಾರ್ಮಿಕ ಭಾವನೆಗೆ ಧಕ್ಕೆ ತರಲು ಯತ್ನಿಸಿದ ಕಾರಣಕ್ಕೆ ಐಪಿಸಿ ಸೆಕ್ಷನ್ 143, 147, 149, 1532 800 ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವೇನು?
ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ ಸಮ್ಮುಖದಲ್ಲಿ ಮಾ.೪ರಂದು ಬಿಜೆಪಿ ಕಾರ್ಯಕರ್ತರು ತಾಲೂಕಾಡಳಿ ಧ್ವಜ ತೆರವುಗೊಳಿಸಿದ್ದ ಪ್ರದೇಶದಲ್ಲಿ ಹನುಮನ ಚಿತ್ರವಿರುವ ಭಗವಾದ್ವಜ (ಹನುಮಧ್ವಜ) ಆರೋಹಣ ಮಾಡಿದ್ದರು. ತಾಲೂಕಾಡಳಿತಕ್ಕೆ ನೀಡಿದ ಗಡುವು ಮುಗಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಧ್ವಜ ಆರೋಹಣ ಮಾಡಿಸಿದ್ದಾರೆ. ಅಲ್ಲದೇ ಧ್ವಜದ ಕಟ್ಟೆಯ ಮೇಲೆ ವೀರ ಸಾವರ್ಕರ್ ಬೀಚ್ ಎಂಬ ನಾಮಫಲಕ ಅಳವಡಿಸಿದ್ದಾರೆ.
ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಧ್ವಜ ಕಟ್ಟೆ ನಿರ್ಮಿಸುವ ಜತೆಗೆ ನಾಮಫಲಕ ಅಳವಡಿಸಿ, ಧ್ವಜವೊಂದನ್ನು ಹಾರಿಸಿದ್ದಾಗಿ ಗ್ರಾಮ ಪಂಚಾಯಿತಿ ಪಿಡಿಒ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.