ಭಟ್ಕಳ (Bhatkal): ಪ್ರತಿಭಾ ಪುರಸ್ಕಾರ, ಕೌಶಲ್ಯಾಭಿವೃದ್ದಿ, ವೈದ್ಯಕೀಯ ವೆಚ್ಚ ಸೇರಿದಂತೆ ಶಿಕ್ಷಣಕ್ಕಾಗಿ (Education) ಜೆ.ಪಿ.ಎನ್. ಪ್ರತಿಷ್ಠಾನ ವರ್ಷಕ್ಕೆ ೨ ಕೋಟಿ ಮೊತ್ತವನ್ನು ವ್ಯಯಿಸುತ್ತಿದೆ ಎಂದು ಜೆ.ಪಿ..ಎನ್. ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳದ ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರ್ಯ ಈಡಿಗ (Ediga), ನಾಮಧಾರಿ (Namadhari) ಸಮಾಜದ ಪ್ರತಿಭಾವಂತ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊದಲು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತಾನು ಮಾಡುವ ಕೆಲಸವನ್ನು ಶೃದ್ದೆಯಿಂದ ಮಾಡಿದರೆ ಪ್ರತಿಫಲ ಖಂಡಿತ ಸಿಗುತ್ತದೆ ಎಂದರು.
ಇದನ್ನೂ ಓದಿ : Lok Adalat/ ಮಾ.೮ರಂದು ಲೋಕ ಅದಾಲತ್
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಇಂದು ಸಮಾಜದಲ್ಲಿರುವ ವಿದ್ಯಾವಂತರು ತಮ್ಮ ಪಾಲಕರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಪೃವೃತ್ತಿಯನ್ನು ಬಿಡಬೇಕು. ತಮ್ಮ ಬೆಳವಣಿಗೆಗೆ ಕಾರಣೀಕರ್ತರಾದ ತಂದೆ ತಾಯಿಯನ್ನು ವೃದ್ದಾಪ್ಯ ಜೀವನದಲ್ಲಿ ಅವರನ್ನು ಗೌರವದಿಂದ ಕಂಡು ಅವರ ಸೇವೆ ಮಾಡುವ ಗುಣ ಹೊಂದಬೇಕು ಎಂದರು.
ಇದನ್ನೂ ಓದಿ : janapada academy/ ಗಣಪು ಗೌಡಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ (Higher Education) ಮಾಡಲು ವಿದೇಶಕ್ಕೆ ಹೋಗುವುದು ಸಾಮಾನ್ಯ. ಆದರೆ ಅವರು ಉನ್ನತ ಶಿಕ್ಷಣ ಪೂರೈಸಿ ಪುನಃ ನಮ್ಮ ದೇಶಕ್ಕೆ ಬಂದು ಇಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿಕೊಂಡು ತಮ್ಮ ತಂದೆ ತಾಯಿಯೊಂದಿಗೆ ಜೀವನ ಸಾಗಿಸಬೇಕು ಎಂದರು.
ಇದನ್ನೂ ಓದಿ : Dead Body/ ಸಮುದ್ರದಲ್ಲಿ ತೇಲುತ್ತಿದ್ದ ಶವ ಪತ್ತೆ
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಜೆ.ಪಿ.ಎನ್. ಪ್ರತಿಷ್ಠಾನ ಭಟ್ಕಳಕ್ಕೆ ಬಂದು ನಮ್ಮ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಈ ಕಾರ್ಯಕ್ಕೆ ದಿವಂಗತ ಜೆ.ಪಿ. ನಾರಾಯಣ ಸ್ವಾಮಿ ಕುಟುಂಬಕ್ಕೆ ನಾವೆಲ್ಲರೂ ಋಣಿಯಾಗಿದ್ದೇವೆ. ಇಂದು ಸಮಾಜದಲ್ಲಿರುವ ಹಿರಿಯರು ಹಾಗೂ ಮುಖಂಡರು ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತಾಗಬೇಕು. ಸಮಾಜದಲ್ಲಿರುವ ಮುಖಂಡರೆ ಸಮಾಜವನ್ನು ಒಡೆಯುವ ಕೆಲಸ ಮಾಡುವುದು ಎಂದು ಮಾಡಬಾರದು ಎಂದರು.
ಇದನ್ನೂ ಓದಿ : Student assaulted/ ವಿದ್ಯಾರ್ಥಿಗೆ ಗುಂಪಿನಿಂದ ಹಲ್ಲೆ
ಕಾರ್ಯಕ್ರಮದಲ್ಲಿದ್ದ ಜೆ.ಪಿ.ಎನ್. ಪ್ರತಿಷ್ಠಾನದ ಕಾರ್ಯದರ್ಶಿ ಕುಸುಮಾ ಅಜಯ್ ಜೆಪಿಎನ್ ಪ್ರತಿಷ್ಠಾನದ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ವಿಶ್ರಾಂತ ಜಿಲ್ಲಾ ನ್ಯಾಯಾಧೀಶ (Retired Judge) ರವಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಗೌರವ ತರುವ ಕೆಲಸ ಮಾಡಬೇಕು. ಎಂದರು. ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾತನಾಡಿದರು.
ಇದನ್ನೂ ಓದಿ : Teacher injured/ ಅಪಘಾತದಲ್ಲಿ ಶಿಕ್ಷಕಗೆ ಗಾಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಡಾ. ನಾಗೇಶ ಕಾಗಾಲ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳು ಇಂದು ವಿವಿಧ ರಂಗದಲ್ಲಿ ಮುಂದೆ ಬರುತ್ತಿದ್ದಾರೆ. ಜಿಲ್ಲೆಯ ಮೂವರು ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಮುಂದೆಯೂ ಸಮಾಜದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರವನ್ನು ಪಡೆದು, ಉನ್ನತ ಹುದ್ದೆ ಗಿಟ್ಟಿಕೊಳ್ಳುವಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಇದನ್ನೂ ಓದಿ : young farmer death/ ಜನತಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಯುವ ರೈತ ಬಾವಿಗೆ ಹಾರಿದ
ಕಾರ್ಯಕ್ರಮದಲ್ಲಿ ಜೆ.ಪಿ.ಎನ್. ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಟ್ರಸ್ಟಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಮಂಜಪ್ಪ, ಕಾರ್ಯದರ್ಶಿ ಎಂ.ಆರ್. ಪೂರ್ಣೇಶ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಾ ನಾಯ್ಕ ಉಪಸ್ಥಿತರಿದ್ದರು. ಸತೀಶಕುಮಾರ ನಾಯ್ಕ ಸ್ವಾಗತಿಸಿದರು. ಡಾ. ಪದ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಪಿ.ಎನ್. ಘಟಕದ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕ ನಾರಾಯಣ ನಾಯ್ಕ ಹಾಗೂ ದಿವ್ಯಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : Temperature/ ೪೦ ಡಿಗ್ರಿ ಸೆಲ್ಸಿಯಸ್ ಮೀರಿದ ತಾಪಮಾನ