ಭಟ್ಕಳ: ಚಲಾವಣೆ ಮಾಡುವ ಉದ್ದೇಶದಿಂದ ನಕಲಿ ವಿದೇಶಿ ನೋಟುಗಳನ್ನು (Foreign fake notes) ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಭಟ್ಕಳ ಶಹರ ಠಾಣೆ (Bhatkal town station) ಪೊಲೀಸರು ಬಂಧಿಸಿದ್ದಾರೆ (arrested).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಮಂಗಳೂರಿನ (Mangaluru) ಬೋಂದೆಲ್ ಪದವಿನಂಗಡಿ ನಿವಾಸಿ ರವೀನ್ ಪ್ರಕಾಶ ಐತಪ್ಪ ಪೂಜಾರಿ (೪೪) ಬಂಧಿತ ಆರೋಪಿ. ಈತನನ್ನು ಜುಲೈ ೨೫ರಂದು ಬಂದರ ರಸ್ತೆಯ ಮೈಸೂರು ಕೆಫೆ ಎದುರಿಗೆ ಬಂಧಿಸಲಾಗಿದೆ. ಈತನ ಬಳಿಯಿದ್ದ ಯುಎಇ ದೇಶದ ನಕಲಿ ದಿರಾಮ್ ನೋಟುಗಳನ್ನು (Foreign fake notes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಟ್ಕಳ ಶಹರ ಠಾಣೆ ಇನ್ಸ್ಪೆಕ್ಟರ್ ದಿವಾಕರ ಪಿ ಎಮ್ ಪ್ರಕರಣ ದಾಖಲಿಸಿಕೊಂಡು (case filed) ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ: Humanity/ ಗಾಯಾಳುಗಳಿಗೆ ನೆರವಾದ ಭಟ್ಕಳ ಉಪವಿಭಾಗಾಧಿಕಾರಿ



