ಭಟ್ಕಳ: ನಗರದ ತೆಂಗಿನಗುಂಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ (National Highway)–66ರಲ್ಲಿ ಕಾರನ್ನು ತಡೆದ ಭಟ್ಕಳ (Bhatkal) ಪೊಲೀಸರು ೫೦ ಸಾವಿರ ರೂ ಮೌಲ್ಯದ ೧.೭೫೦ ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ (Ganja seized).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಗರ ಠಾಣೆಯ ಪಿಎಸ್ಐ ನವೀನ್ ಎಸ್ ನಾಯ್ಕ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಗಾಂಜಾ, ಸಾಗಾಟಕ್ಕೆ ಬಳಸಿದ ಕಾರು, ಡಿಜಿಟಲ್ ತೂಕ ಮಾಪನ ಯಂತ್ರ ಹಾಗೂ ಇತರೆ ವಸ್ತುಗಳನ್ನು ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮತ್ತು ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಳ್ಳಲಾಯಿತು (Ganja seized).
ಇದನ್ನೂ ಓದಿ: Ex Servicemen/ ಭಟ್ಕಳ ಲೈಟ್ಹೌಸ್ನಲ್ಲಿ ಸ್ಥಳೀಯರಿಗಿಲ್ಲ ಆದ್ಯತೆ
ಆರೋಪಿಗಳಾದ ಹೊನ್ನಾವರ (Honnavar) ತಾಲೂಕು ಟೊಂಕಾ ಕಾಸರಕೋಡ ಮೂಲದ ಸಯ್ಯದ್ ಗುಲ್ಜಾರ್ (೨೨) ಮತ್ತು ಕಾರಿನ ಮಾಲೀಕ ಸಯ್ಯದ್ ಮುಕ್ತಿಯಾರ್ ದಾಳಿ ವೇಳೆ ಪರಾರಿಯಾದರು. ಆರೋಪಿಗಳ ಮೇಲೆ ಎನ್ಡಿಪಿಎಸ್ ಕಾಯಿದೆ ಅಡಿಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ತಿಮ್ಮಪ್ಪ ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಗೆ ಡಿವೈಎಸ್ಪಿ ಮಹೇಶ್ ಎಂ ಕೆ ಮತ್ತು ಸಿಪಿಐ ದಿವಾಕರ ಮಾರ್ಗದರ್ಶನ ನೀಡಿದ್ದರು.
ಇದನ್ನೂ ಓದಿ: Bhatkal BJP/ ರಾಜ್ಯಾಧ್ಯಕ್ಷರ ಭೇಟಿಯಾದ ಭಟ್ಕಳ ಬಿಜೆಪಿ ನಿಯೋಗ



