ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಡಿಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (NSS) ಘಟಕದ ವಿಶೇಷ ವಾರ್ಷಿಕ ಶಿಬಿರವು ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕಾ ಪಂಚಾಯತ್ ಭಟ್ಕಳ, ಗ್ರಾಮ ಪಂಚಾಯತ್ ಮಾರುಕೇರಿ ಇವರ ಸಹಯೋಗದೊಂದಿಗೆ ಡಿ ೧೫ ರಿಂದ ೨೧ರ ವರೆಗೆ ಭಟ್ಕಳದ ಕಲ್ಲಬ್ಬೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

“ನನ್ನ ಭಾರತಕ್ಕಾಗಿ ಯುವಕರು – ಡಿಜಿಟಲ್ ಸಾಕ್ಷರತೆಗಾಗಿ ಯುವಕರು”ಎಂಬ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಶಿಬಿರವನ್ನು ಮಾರುಕೇರಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಎಂ ಡಿ ನಾಯ್ಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ಹೆಬ್ಬಾರ, ಕೃಷ್ಣ ಮೊಗೇರ, ಸುಬ್ರಮಣ್ಯ ನಾಯ್ಕ, ಅಕ್ಷಯ ಶೆಟ್ಟಿ, ಆನಂದ ದೇವಾಡಿಗ, ಈಶ್ವರ ಗೊಂಡ, ಸಿಸಿಲಿಯಾ ಪಿಂಟೋ, ಚಂದನಾ ನಾಯ್ಕ ಉಪನ್ಯಾಸ ನೀಡಿದರು.

ಇದನ್ನು ಓದಿ: Bhatkal Journalists/ ಭಟ್ಕಳ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ ಎಂ ಬಿ ದಳಪತಿ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಪ್ರತಿದಿನ ಮುಂಜಾನೆ ಯೋಗ ತರಬೇತಿ, ಗಣ್ಯರಿಂದ ಧ್ವಜಾರೋಹಣ, ಚಿಂತನೆ ಪ್ರಸ್ತುತಿ, ಶ್ರಮದಾನ, ಜಾಗೃತಿ ಕಾರ್ಯಕ್ರಮಗಳು, ಸಂಜೆ ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. ಉನ್ನತ ಭಾರತ ಅಭಿಯಾನದ ಅಡಿಯಲ್ಲಿ ಗ್ರಾಮದ ಸಮೀಕ್ಷೆ ಹಾಗೂ ಶಿಬಿರಾರ್ಥಿಗಳಿಂದ ಪರಿಸರದ ಜಾಗೃತಿ, ಆರೋಗ್ಯ, ಸ್ವಚ್ಛತೆ, ಪ್ಯಾಸ್ಟಿಕ್‌ಬಳಕೆಯ ಕುರಿತಾಗಿ ಜಾಥಾ, ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ, “ಹಸಿರೇ ಉಸಿರು” ತರಬೇತಿ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಇದನ್ನು ಓದಿ: Vidyotsava/ ವಿಜೃಂಭಣೆಯಿಂದ ನಡೆದ ವಿದ್ಯೋತ್ಸವ ೨೦೨೫

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗೋಪಾಲ ಪ್ರಭು ಹಾಗೂ ಸದಸ್ಯರು ಹಾಜರಿದ್ದರು. ಉಪ-ಪ್ರಾಂಶುಪಾಲ ಪಿ ಎಸ್ ಹೆಬ್ಬಾರ, ಶಾಲಾ ಮುಖ್ಯೋಪಾಧ್ಯಾಯನಿ ವಿಮಲಾ ಮೊಗೇರ, ಅಂಗನವಾಡಿ ಶಿಕ್ಷಕಿ ಸುಧಾ ಭಟ್ ಹಾಜರಿದ್ದರು. ವಿಶ್ವನಾಥ ಭಟ್ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದರು. ಸಮಾರೋಪ ಭಾಷಣವು ಪ್ರಾಚಾರ್ಯ ಶ್ರೀನಾಥ್ ಪೈರವರಿಂದ ನೆರವೇರಿತು. ಎನ್ಎಸ್ಎಸ್ (NSS) ಕಾಯ೯ಕ್ರಮ ಅಧಿಕಾರಿ ಶಾಂತರಾಯ ಗೊಂಡ, ಸಹ-ಕಾಯ೯ಕ್ರಮ ಅಧಿಕಾರಿ ವಿನಾಯಕ ನಾಯ್ಕ, ಉಪನ್ಯಾಸಕರು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನು ಓದಿ: Cleaning/ ಹಿಂದೂ ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್