ಭಟ್ಕಳ: ನಾಯಿಯೊಂದು ಅಡ್ಡ ಬಂದು ಬೈಕ್ ಸ್ಕಿಡ್ ಆಗಿದ್ದರಿಂದ (bike skidded) ಹಿಂಬದಿ ಸವಾರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi )ಜಿಲ್ಲೆಯ ಬೈಂದೂರು (Byndooru) ತಾಲೂಕಿನ ಮೂಡಮಠದ ನೀರಕೆರೆ ನಿವಾಸಿ ವಾಸುದೇವ ತಂದೆ ಮಹಾಬಲೇಶ್ವರ ಹೆಬ್ಬಾರ (೨೦) ಗಾಯಗೊಂಡವರು. ಬೈಕ್ ಚಲಾಯಿಸುತ್ತಿದ್ದ ನೀರಕೆರೆಯ ಶ್ರೀಪತಿ ತಂದೆ ನಾರಾಯಣ ಹೆಬ್ಬಾರ (೫೪) ವಿರುದ್ಧ ದೂರು ದಾಖಲಾಗಿದೆ. ಜನವರಿ ಮೂರರಂದು ರಾತ್ರಿ ೧೦ರ ಸುಮಾರಿಗೆ ಭಟ್ಕಳ (Bhatkal) ತಾಲೂಕಿನ ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಬೆಳಕೆ ಮಯೂರ ಡಾಬಾ ಎದುರು ಘಟನೆ ನಡೆದಿದ್ದು, ಜನವರಿ ೬ರಂದು ದೂರು ದಾಖಲಾಗಿದೆ.

ಇದನ್ನು ಓದಿ: Fisherman died/ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು

ನಾಯಿ ಅಡ್ಡ ಬಂದಿದ್ದರಿಂದ ಒಮ್ಮೇಲೆ ಬ್ರೇಕ ಹಾಕಿ ಮೋಟಾರ್ ಸೈಕಲ್ ಸ್ಕಿಡ್ ಆಗಿ (bike skidded) ಬಿದ್ದು ಹಿಂಬದಿ ಸವಾರನಾದ ಮಹಾಬಲೇಶ್ವರ ತಂದೆ ವಾಸುದೇವ ಹೆಬ್ಬಾರ ಇವರಿಗೆ ಬಲಗಾಲಿನ ಜಾಯಿಂಟ ಹತ್ತಿರ ಗಾಯವಾಗಿದೆ.

ಇದನ್ನು ಓದಿ: Assault/ ನೆರೆಮನೆಯವರಿಂದ ಮಹಿಳೆಯ ಮೇಲೆ ಹಲ್ಲೆ