ಭಟ್ಕಳ: ಇಲ್ಲಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ (martial arts) ಎಂಡ್ ಫಿಟ್ನೆಸ್ (fitness) ಹಾಗೂ ಬೆಂಗಳೂರಿನ (Bengaluru) ಶೋಟೋಕನ್ ಇಂಡಿಯಾ ಆರ್ಗನೈಸೇಶನ್ ಸಹಯೋಗದಲ್ಲಿ ನಡೆದ ಕರಾಟೆ (Karate) ಬ್ಲಾಕ್ ಬೆಲ್ಟ್ (ಬ್ಲ್ಯಾಕ್ belt) ವಿತರಣೆ ಕಾರ್ಯಕ್ರಮ ಇಲ್ಲಿನ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮ ಉದ್ಘಾಟಿಸಿದ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಮಾತನಾಡಿ, ಕರಾಟೆ (Karate) ಒಂದು ಉತ್ತಮ ಕಲೆಯಾಗಿದ್ದು ಹೆಣ್ಣು ಮಕ್ಕಳು ಅಗತ್ಯ ಕರಾಟೆ ಕಲಿಯಬೇಕು. ಅನೇಕ ಸಂದರ್ಭದಲ್ಲಿ ದುಷ್ಟರಿಂದ ರಕ್ಷಿಸಿಕೊಳ್ಳಲು ಇದು ಸಹಕಾರಿಯಾವುದು ಎಂದರು. ೨೦೧೩ರಲ್ಲಿ ಸರಕಾರ ಪ್ರೌಢಶಾಲಾ ಮಕ್ಕಳಿಗೆ ಕರಾಟೆ ಕಲಿಕೆಯನ್ನು ಆರಂಭ ಮಾಡಿದ್ದರೂ ನಂತರದ ದಿನಗಳಲ್ಲಿ ಅದು ನಿಂತು ಹೋಯಿತು. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸರಕಾರ ಅದನ್ನು ಪುನಃ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
Kantara Girl/ ಭಟ್ಕಳದ ಶಾಲಾ ಮಕ್ಕಳಿಗೆ ನೆರವಾದ ‘ಕಾಂತಾರ ಹುಡುಗಿ’
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಸಂಸ್ಥಾಪಕ ಮತ್ತು ತಾಂತ್ರಿಕ ನಿರ್ದೇಶಕ ಭಾರ್ಗವ ರೆಡ್ಡಿ ಮಾತನಾಡಿ, ಕರಾಟೆ ಕಲಿಕೆಯಿಂದ ಮಕ್ಕಳು ಮುಂದೆ ಕ್ರೀಡಾ ಕೋಟಾದಲ್ಲಿ ತಮಗೆ ಉತ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ. ಅನೇಕ ಮಕ್ಕಳಿಗೆ ಶೈಕ್ಷಣಿಕ ಅರ್ಹತೆಯೊಂದಿಗೆ ಕ್ರೀಡಾ ಕೋಟಾ ಇದ್ದಲ್ಲಿ ಮುಂದೆ ಅವರಿಗೆ ಇಷ್ಟವಾದ ಕೋರ್ಸಗೆ ಪ್ರವೇಶ ಪಡೆಯಲು ಅನುಕೂಲ ಎಂದರು.
Chippikallu Tragedy/ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧನಸಹಾಯ
ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಪ್ರಥಮವಾಗಿ ಕರಾಟೆ ಆರಂಭ ಮಾಡಿದ ವಾಸು ನಾಯ್ಕ ಅವರನ್ನು ಸ್ಮರಿಸಿದರು. ವಿದ್ಯಾಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪಾ ರಮೇಶ ಖಾರ್ವಿ ಮಾತನಾಡಿ, ತಮ್ಮ ಶಾಲೆಯ ಮೂವರು ವಿದ್ಯಾರ್ಥಿಗಳೂ ಬ್ಲಾಕ್ ಬೆಲ್ಟ್ ಪಡೆದಿರುವುದು ಸಂತಸ ತಂದಿದೆ ಎಂದರು.
Leopard/ ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಭಟ್ಕಳದಲ್ಲಿ ನಾಗಶ್ರೀ ಮಾರ್ಷಲ್ ಆರ್ಟ್ಸ ಎಂಡ್ ಫಿಟ್ನೆಸ್ ಮತ್ತು ಕರಾಟೆ ತರಬೇತಿಯನ್ನು ಆರಂಭಿಸುವ ಮೂಲಕ ಈಶ್ವರ ನಾಯ್ಕ ಹಾಗೂ ನಾಗಶ್ರೀ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶುಭ ಹಾರೈಸಿದರು. ಕಾನೂನು ಸಲಹೆಗಾರ ಮನೋಜ ನಾಯ್ಕ, ಸರ್ಪನಕಟ್ಟೆ ವೀರ ಸಾವರಕರ್ ಸೇವಾ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಜಿಲ್ಲಾಧ್ಯಕ್ಷ ಈಶ್ವರ ನಾಯ್ಕ ಉಪಸ್ಥಿತರಿದ್ದರು.
Murinakatte/ ಮುರಿನಕಟ್ಟೆ ಧ್ವಂಸಕ್ಕೆ ಆಕ್ರೋಶ-ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
ಪವನ ವೆಂಕಟೇಶ ನಾಯ್ಕ, ರೋಹಿಪ್ರಸಾದ ಸಂತೋಷ ನಾಯ್ಕ, ಧನ್ವಿತಾ ವಾಸು ಮೊಗೇರ, ಸಾನ್ವಿ ಚಂದ್ರ ನಾಯ್ಕ, ಅಖಿಲಾ ಚಂದ್ರಕಾಂತ ನಾಯ್ಕ, ಯಶಸ್ ವಾಮನ ಮೊಗೇರ, ಯಶಸ್ ಶ್ರೀಧರ ಮೊಗೇರ, ರತನ ಲಕ್ಷ್ಮಣ ಪಾವಸ್ಕರ್, ಶ್ರೇಯಸ್ ಭಾಸ್ಕರ ಮೊಗೇರ ಮತ್ತು ಸುರೇಶ ನಾಯ್ಕ ಇವರುಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ಡಿಗ್ರಿ ವಿತರಣೆ ಮಾಡಲಾಯಿತು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ನಾಗಶ್ರೀ ಸ್ವಾಗತಿಸಿ, ವಂದಿಸಿದರು.
Murinakatte/ ಮುರಿನಕಟ್ಟೆ ಹೋರಾಟಕ್ಕೆ ದೈವಬಲ; ಪೂಜೆ ಬಳಿಕ ನಿಂತ ಮಳೆ!



