ಭಟ್ಕಳ: ಕನ್ನಡದ ಕಾಂತಾರ (kantara) ಚಿತ್ರ ಸೇರಿದಂತೆ ಹಲವು ತೆಲುಗು (Telugu), ತಮಿಳು (Tamil) ಚಿತ್ರದಲ್ಲಿ ನಟಿಸಿರುವ ಭಟ್ಕಳದ ಹುಡುಗಿಯಾದ ರಮ್ಯಾ ಕೃಷ್ಣ ಯಾನೆ ಐರಾ (Kantara Girl) ತಾವು ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕೆನ್ನುವ ಹಂಬಲದೊಂದಿಗೆ ಭಟ್ಕಳಕ್ಕೆ (Bhatkal) ಆಗಮಿಸಿ ಗ್ರಾಮೀಣ ಕುಗ್ರಾಮ ಪ್ರದೇಶದ ವಿದ್ಯಾರ್ಥಿನಿಯರಿಗೆ ಸ್ಕೂಲ್ ಬ್ಯಾಗ್, ನ್ಯಾಪ್‌ಕಿನ್ ಮತ್ತು ನೋಟಬುಕ್ ಗಳನ್ನು ನೀಡಿ ನೆರವಾದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಬುಡುಕಿ, ನೂಜ್, ಕೆಕ್ಕೋಡನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ಹಾಗೂ ಬೆಳಕೆಯ ಪೌಢಶಾಲಾ ವಿದ್ಯಾರ್ಥಿನಿಯರಿಗೆ ನ್ಯಾಪ್ ಕಿನ್, ನೋಟ್ ಬುಕ್ ಸೇರಿದಂತೆ ಸ್ಟೇಷನರಿ ಸಾಮಗ್ರಿಗಳನ್ನು ನೀಡಿದರು.

Chippikallu Tragedy/ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧನಸಹಾಯ

ತಾನು ಭಟ್ಕಳದಲ್ಲಿ ಪ್ರಾಥಮಿಕ ಶಾಲೆ ಕಲಿತು ಬೆಂಗಳೂರಿನಲ್ಲಿ (Bengaluru) ಇಂಜಿನಿಯರಿಂಗ್ (engineering) ಮುಗಿಸಿದ ನಂತರ ಚಿತ್ರರಂಗಕ್ಕೆ (film industry) ಪ್ರವೇಶಿಸಿ ಹಲವು ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದೇನೆ. ನಾನು ಚಿತ್ರರಂಗದ ನಂಟಿನೊಂದಿಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ “ಆಹಾರ ಇಂಡಿಯಾ” ಎನ್ಜಿಓನಲ್ಲಿ ಗುರುತಿಸಿಕೊಂಡು ಇದರ ಮೂಲಕ ಹಲವು ಊರಿನ ಗ್ರಾಮೀಣ ಕುಗ್ರಾಮ ಪ್ರದೇಶದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ನೀಡಿದ್ದೇನೆ. ನನ್ನ ಹುಟ್ಟೂರಿಗೂ ಬಂದು ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯ ನೀಡಿದ್ದೇನೆ. ಮುಂದೆಯೂ ಸಹಕಾರ ನೀಡುವೆ ಎಂದರು.

Leopard/ ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ 

ಮಾರುಕೇರಿ ಪೌಢಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ನಾರಾಯಣ ಹೆಬ್ಬಾರ ಹಾಗೂ ಇತರರು ಚಿತ್ರನಟಿಯನ್ನು (Kantara Girl) ಸ್ವಾಗತಿಸಿ, ಶಾಲು ಹೊದೆಸಿ ಗೌರವಿಸಿದರು. ಪೌಢಶಾಲೆಯ ಮುಖ್ಯ ಶಿಕ್ಷಕ ಪಿ ಟಿ ಚೌಹಾಣ್, ಶಿಕ್ಷಕರಾದ ಉದಯ ಭಟ್, ವಿನಾಯಕ್ ಭಟ್, ದಿನೇಶ, ಕೃಷ್ಣ ನಾಯ್ಕ ಕಾಟಿಮನೆ ಉಪಸ್ಥಿತರಿದ್ದರು.

Murinakatte/ ಮುರಿನಕಟ್ಟೆ ಧ್ವಂಸಕ್ಕೆ ಆಕ್ರೋಶ-ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ