ಭಟ್ಕಳ: ಮುರುಡೇಶ್ವರನ (Murudeshwar) ದರ್ಶನಕ್ಕೆ ಬಂದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿ ಇದ್ದ ಚಿನ್ನದ ಸರ ಕಳುವಾದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ಕೇರಳದ (Kerala) ಕಣ್ಣೂರು (Kannur) ನಿವಾಸಿ ಜೈಯಂತ ಎ.ವಿ ಎಂಬವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೂರಿನಲ್ಲಿ ತಿಳಿಸಿರುವಂತೆ, ಜನವರಿ 8ರಂದು ದೂರದಾರ, ತನ್ನ ಹೆಂಡತಿ ಮಕ್ಕಳು ಮತ್ತುತಂದೆ-ತಾಯಿ ಹಾಗೂ ಸಂಬಂಧಿಕರೊಂದಿಗೆ ಡಿಸೆಂಬರ್ 31ರಂದು ಮುರ್ಡೇಶ್ವರ (Murudeshwar) ದೇವರ ದರ್ಶನಕ್ಕೆ ಬಂದಿದ್ದರು. ಮಧ್ಯಾಹ್ನ ೧೨ ಗಂಟೆಯಿಂದ ಮಧ್ಯಾಹ್ನ ೧೨:೩೦ ಗಂಟೆಯ ನಡುವಿನ ಅವಧಿಯಲ್ಲಿ ಮುರ್ಡೇಶ್ವರದ ದೇವಸ್ಥಾನದ ದೇವರ ದರ್ಶನಕ್ಕೆಂದು ಅವರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.

ಇದನ್ನು ಓದಿ: Bike collision/ ರಾ ಹೆ.ಯಲ್ಲಿ ಅತಿ ವೇಗ, ನಿರ್ಲಕ್ಷತನ ಚಾಲನೆ: ಬೈಕುಗಳ ಡಿಕ್ಕಿ

ಯಾರೋ ಕಳ್ಳರು ಪಿರ್ಯಾದಿಯ ತಾಯಿಗೆ ಗೊತ್ತಾಗದ ಹಾಗೆ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗಿನ್ ಜಿಪ್ ತೆಗೆದು ಅದರಲ್ಲಿದ್ದ ಶ್ರೀಗಂಧದ ಬೀಜ ಇರುವ ಅಂದಾಜು ೩೬ ಗ್ರಾಂ ತೂಕದ ಬಂಗಾರದ ಚೈನ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಇದನ್ನು ಓದಿ: Accused arrested/ ೩೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ