ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ (arrested) ಕ್ರಮ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವೃತ್ತಿಯಲ್ಲಿ ಚಾಲಕನಾಗಿರುವ ಭಟ್ಕಳ ತಾಲೂಕಿನ ಹೆಬಳೆಯ ಅತ್ತಾರ ಮೊಹಲ್ಲಾ ನಿವಾಸಿ ಅಬ್ರಾರ ಶೇಖ್ ತಂದೆ ಮೋಹಿದ್ದೀನ್ ಶೇಖ್ (೨೪) ಬಂಧಿತ ಆರೋಪಿ (arrested). ಈತನು ದಿನಾಂಕ: ೩೦-೦೧-೨೦೨೬ರಂದು ಸಂಜೆ ೭.೩೫ ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರ ವರಕೊಡ್ಲು ಸಾರ್ವಜನಿಕ ರಸ್ತೆಯ ಬಳಿಯಲ್ಲಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿ ಪೊಲೀಸರು ಮಾತನಾಡಿಸಿದಾಗ, ಅವನ ಬಾಯಿಯಿಂದ ಗಾಂಜಾ ನಮೂನೆಯ ಘಾಟು ವಾಸನೆ ಬರುತ್ತಿತ್ತು.
ಇದನ್ನು ಓದಿ: Land dispute/ ಜಾಗದ ವಿಷಯದಲ್ಲಿ ಕುಟುಂಬಗಳ ನಡುವೆ ಗಲಾಟೆ
ಅವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದ. ಸದ್ರಿಯವನ ವೈದ್ಯಕೀಯ ಪರೀಕ್ಷೆಯನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿಸಿದಾಗ ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ. ಪಿಎಸ್ಐ ಭರಮಪ್ಪ ಬೆಳಗಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ: Outstanding Achiever/ ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿ ಪ್ರದಾನ



