ಹೊನ್ನಾವರ: ತಾಲೂಕಿನ ಅಳ್ಳಂಕಿ ಫ್ಯಾಕ್ಟರಿ ಕ್ರಾಸ್ ಹತ್ತಿರ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿಯಾದ (bus overturn) ಘಟನೆಯಲ್ಲಿ ಭಟ್ಕಳ (Bhatkal) ತಾಲೂಕಿನ ಐವರು ಸಹಿತ ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕುರಿತು ಹೊನ್ನಾವರ (Honnavar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾ ೮ರಂದು ರವಿವಾರ ಸುಮಾರು ೮ ಗಂಟೆಯ ಸುಮಾರಿಗೆ ಭಟ್ಕಳದಿಂದ ಬೆಂಗಳೂರಿಗೆ (Bengaluru) ಹೊರಟ್ಟಿದ್ದ ಶ್ರೀಕುಮಾರ್ ಟ್ರಾವೆಲ್ಸ್ ಬಸ್ ರಾತ್ರಿ ೯.೩೦ ಗಂಟೆಯ ಸುಮಾರಿಗೆ ಹೊನ್ನಾವರದಿಂದ ಸಾಗರ (Sagar) ರಸ್ತೆಯಲ್ಲಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ (bus overturn). ಅಪಘಾತದಲ್ಲಿ ಬಸ್ಸಿನ ಪ್ರಯಾಣಿಕರಾದ ಹೊನ್ನಾವರ ತಾಲೂಕಿನ ಗುಂಡಬಾಳದ ಸುರೇಶ ಕನ್ಯಾ ಗೌಡ (೩೬), ಅವರ ಪತ್ನಿ ಆಶಾ ಸುರೇಶ ಗೌಡ (೩೧) ಮತ್ತು ಅವರ ಪುತ್ರಿ ಭೂಮಿ ಸುರೇಶ ಗೌಡ (೨) ಇವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇವರ ಪುತ್ರ ಶ್ರೀಯಾನ್ ಸುರೇಶ ಗೌಡ (೩) ಕೂಡ ಗಾಯಗೊಂಡಿದ್ದಾರೆ.
Hinduism/ ಜಗತ್ತಿನ ಒಳಿತು ಬಯಸುವ ಹಿಂದೂ ಧರ್ಮ: ಮೋಹನದಾಸ ಪರಮಹಂಸ ಸ್ವಾಮಿ
ಉಳಿದಂತೆ, ಹೊನ್ನಾವರ ತಾಲೂಕಿನ ಗುಣವಂತೆ ಹಕ್ಕಲಕೇರಿಯ ನರಸಿಂಹ ತಂದೆ ಕ್ಷೇತ್ರ ಗೌಡ (೨೫), ಭಟ್ಕಳ ತಾಲೂಕಿನ ಮುರ್ಡೇಶ್ವರದ (Murdeshwar) ನ್ಯಾಶನಲ್ ಕಾಲೋನಿಯ ಮಹಮ್ಮದ ಇನಾಮ್ ಸಯ್ಯದ ಮೆಹಬೂಬ್ (೨೮), ಹೊನ್ನಾವರದ ದುರ್ಗಾಕೇರಿಯ ಉಮಾ ಸುರೇಶ ಮೇಸ್ತ (೨೮), ಭಟ್ಕಳ ತಾಲೂಕಿನ ಹಾಡುವಳ್ಳಿಯವರಾದ ಸುಚಿತ್ರಾ ವಿಠ್ಠಲ ನಾಯ್ಕ (೨೨) ಮತ್ತು ಪ್ರವೀಣ ಮಂಜಪ್ಪ ನಾಯ್ಕ (೨೭), ಹೊನ್ನಾವರದ ಚರ್ಚರೋಡಿನ ಜೋಯಿಸ್ ರಾಕಿ ರೊಡ್ರಗೀಸ್ (೨೫), ಹೊನ್ನಾವರ ತಾಲೂಕಿನ ಬಾರಗದ್ದೆಯ ಪ್ರಿಯಾಂಕ ಕೃಷ್ಣ ವೆರ್ಣೇಕರ (೨೫), ಭಟ್ಕಳ ತಾಲೂಕಿನ ಸಬ್ಬತ್ತಿಯ ಪೂಜಾ ಈರಪ್ಪ ನಾಯ್ಕ (೨೧), ಹೊನ್ನಾವರ ತಾಲೂಕಿನ ನಾಜಗಾರದ ಗಾಯತ್ರಿ ನಾರಾಯಣ ಗೌಡ (೨೨), ಸಾಗರ ತಾಲೂಕಿನ ಮಾವಳ್ಳಿಯ ಸುರೇಶ ಸೋಮಯ್ಯ ನಾಯ್ಕ (೩೫), ಹೊನ್ನಾವರ ತಾಲೂಕಿನ ಇಡಗುಂಜಿಯ ನಿವೇದಿತಾ ಹರೀಶ ನಾಯ್ಕ (೨೬), ಮಾಳ್ಕೋಡಿನ ಸೌಮ್ಯ ಪ್ರಭಾಕರ ಹೆಗಡೆ(೨೩), ಭಟ್ಕಳ ತಾಲೂಕಿನ ಬಂದರ ವಾಸಿ ಅನ್ನಪೂರ್ಣಾ ನಾರಾಯಣ ಖಾರ್ವಿ (೨೮), ಹೊನ್ನಾವರ ತಾಲೂಕಿನ ಕವಲಕ್ಕಿಯ ಸಂದ್ಯಾ ಗಜಾನನ ಹೆಗಡೆ(೨೬), ಇಡಗುಂಜಿಯ ಮನೋಜ ಪಂಡಿತ (೨೪), ಕಾಸರಕೋಡಿನ ಸುಬ್ರಹ್ಮಣ್ಯ ಆಚಾರಿ (೨೫) ಮತ್ತು ಇತರರಿಗೆ ಸಾದಾ ಮತ್ತು ಗಂಭೀರ ಸ್ವರೂಪದ ಗಾಯಗಳಾಗಿವೆ.
Anantkumar Hegde/ ನಿಗೂಢವಾಗಿಯೇ ಉಳಿದ ಅನಂತಕುಮಾರ ಹೆಗಡೆ ರಾಜಕೀಯ ನಡೆ: ಕಾರ್ಯಕರ್ತರಿಗೆ ನಿರಾಸೆ
ಬಸ್ ಚಾಲಕ ಹೊನ್ನಾವರ ತಾಲೂಕಿನ ಮೂಡ್ಕಣಿಯ ಅಡಕಾರ ಗುಡ್ಡೇಕೇರಿ ನಿವಾಸಿ ಗಿರೀಶ ನಾಯ್ಕ, (೩೫) ಅವರ ಅತಿ ವೇಗ ಮತ್ತು ನಿಷ್ಕಾಳಜಿತನದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಗಾಯಾಳು ನರಸಿಂಹ ತಂದೆ ಕ್ಷೇತ್ರ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ (Case filed).
Margosa Mahal/ ಭಟ್ಕಳ ತಾಲೂಕಿನ ಸುತ್ತಮುತ್ತ ‘ಮರ್ಗೋಸ ಮಹಲ್’ ಚಿತ್ರೀಕರಣ


