ಭಟ್ಕಳ: ವಾಕರಸಾ ಸಂಸ್ಥೆಯ (NWKRTC) ಯಲ್ಲಾಪುರ (Yellapur) ಘಟಕದ ಬಸ್ ಮಂಗಳವಾರದಂದು ರಾತ್ರಿ ಟ್ಯಾಂಕರ್ ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿಯಲ್ಲಿ ಬೈಕ್ ನಲ್ಲಿ ಹೋಗುತಿದ್ದ ನವ ದಂಪತಿ (newlywed couple) ಮೇಲೆ ಬಸ್ ಹತ್ತಿಸಲು ಹೋಗಿದ್ದು ತಕ್ಷಣ ಎಚ್ಚೆತ್ತ ಬೈಕ್ ಸವಾರ ಅದರಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಬಸ್ಸು ಮಂಗಳೂರಿನಿಂದ (Mangaluru) ಯಲ್ಲಾಪುರ ಕಡೆಗೆ ಹೋಗುತ್ತಿದ್ದ ವೇಳೆ ಭಟ್ಕಳದ (Bhatkal) ಮಾರುತಿ ಸುಜುಕಿ ಶೋರೂಂ ಸಮೀಪ ಈ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ನಗರದ ಮಣ್ಕುಳಿಯ ನಿವಾಸಿ ಗಣೇಶ ನಾಯ್ಕ ಹಾಗೂ ಅವರ ಪತ್ನಿ (newlywed couple) ಮುಂಡಳ್ಳಿಯಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮ ಮುಗಿಸಿ ಮಣ್ಕುಳಿಯ ಮನೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದವರನ್ನು ಗಮನಿಸದೇ ಏಕಾಏಕಿ ಬಸ್ಸನ್ನು ಬೈಕ್ ಎದುರು ಓವರ್ ಟೇಕ್ ಮಾಡಿದ್ದು, ಈ ವೇಗದ ಓವರ್ ಟೇಕ್ ಕಾರಣದಿಂದ ಕೂದಲೆಳೆ ಅಂತರದಲ್ಲಿ ಬೈಕನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tribute/ ಡಾ ಆರ್ ವಿ ಸರಾಫರಿಗೆ ನುಡಿನಮನ-ಶಾಲೆಗೆ ೨.೫೦ ಲಕ್ಷ ರೂ ದೇಣಿಗೆ

ಈ ಸಮಯದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಮಣ್ಣು ರಸ್ತೆಗೆ ಬಸ್ ಇಳಿದಿದ್ದು, ತದನಂತರ ಹಾಗೋ ಹೀಗೋ‌ ನಿಯಂತ್ರಣ ಮಾಡಿ ಭಟ್ಕಳ‌ ಬಸ್ ನಿಲ್ದಾಣದ ಕಡೆಗೆ ತೆರಳಿದೆ. ಬಳಿಕ ಬೈಕ್ ಸವಾರ ಬಸ್ ಬೆನ್ನತ್ತಿ ಭಟ್ಕಳ ಬಸ್ ನಿಲ್ದಾಣದ ಬಳಿ ಹೋಗಿ ಚಾಲಕನನ್ನು ಪ್ರಶ್ನಿಸಿದ್ದಕ್ಕೆ, ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಬಸ್ ಡಿಪೋ ಮ್ಯಾನೇಜರ್ ಗೆ ಘಟನೆಯ ಬಗ್ಗೆ ಸವಾರ ವಿವರಿಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಬಸ್ ಡಿಪೋ ಮ್ಯಾನೇಜರ್ ಗೆ ಕರೆ ಮಾಡಿ ಮಾತನಾಡಿದಾಗ ಲಿಖಿತ ದೂರು ನೀಡಲು ತಿಳಿಸಿದ್ದಾರೆ. ಈ ಬಗ್ಗೆ ಬೈಕ ಸವಾರ ಗಣೇಶ ನಾಯ್ಕ ಹುಬ್ಬಳ್ಳಿಯ (Hubballi) ವಾಕರಸಾ ಸಂಸ್ಥೆಯ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ವಾಟ್ಸಾಪ್ ಮೂಲಕ ದೂರು ಸಲ್ಲಿಸಿದ್ದಾರೆ.

beer bottle/ ನಾಯಿ ವಿಚಾರಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ