ಭಟ್ಕಳ: ವಾಹನದಲ್ಲಿ ಅಕ್ರಮವಾಗಿ ಎರಡು ಜಾನುವಾರು ಸಾಗಾಟ ಮಾಡುತ್ತಿದ್ದ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದು (arrested), ಜಾನುವಾರುಗಳನ್ನು ರಕ್ಷಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಮುಟ್ಟಳ್ಳಿಯ ನಾಗರಾಜ ತಂದೆ ವೆಂಕಟರಮಣ ನಾಯ್ಕ (೩೫) ಬಂಧಿತ ಆರೋಪಿ. ಮಾ ೧೦ರಂದು ರಾತ್ರಿ ೯.೧೫ಕ್ಕೆ ಭಟ್ಕಳದ ಕಡೆಯಿಂದ ಭಟ್ಕಳ ತಾಲೂಕಿನ ಕುಂಟವಾಣಿ ಕಡೆಗೆ ವಾಹನದಲ್ಲಿ ಜಾನುವಾರುಗಳನ್ನ ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಪಿಎಸ್ಐ ವೆಂಕಟೇಶ ಮುರನಾಳ ನಡೆಸಿದರು. ೨೦ ಸಾವಿರ ರೂ ಬೆಲೆಯ ಒಂದು ಆಕಳು ಹಾಗೂ ಒಂದು ಹೋರಿಯನ್ನು ಪೊಲೀಸರು ರಕ್ಷಿಸಿದ್ದಾರೆ. ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ (arrested).


