ಭಟ್ಕಳ: ಮಂಗಳೂರಿಗೆ (Mangaluru) ಚಿಕಿತ್ಸೆಗಾಗಿ ತೆರಳುತ್ತಿದ್ದ ವೃದ್ಧನೊಬ್ಬ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳ (Bhatkal) ತಾಲೂಕಿನ ಶಿರಾಲಿಯ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ (Karwar) ತಾಲೂಕಿನ ಅಮದಳ್ಳಿ ಟೋಲ್ ನಾಕಾ ಸಮೀಪದ ನಿವಾಸಿ ಬಾಬು ಪಾಂಡುರಂಗ ಪಡ್ತಿ (೭೦) ಮೃತ ವೃದ್ಧ. ಅಸ್ವಸ್ಥಗೊಂಡಿದ್ದ ಬಾಬು ಪಡ್ತಿ ಅವರನ್ನು ಚಿಕಿತ್ಸೆಗಾಗಿ ಪುತ್ರ ಅಕ್ಷಯ ಪಡ್ತಿ ಮತ್ಸ್ಯಗಂಧ ಎಕ್ಸ್ಪ್ರೆಸ್ (Matsyagandha Express) ರೈಲಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

Minister Mankal Vaidya / ಸಚಿವ ಮಂಕಾಳ ವೈದ್ಯರ ವಿರುದ್ಧ ಇ ಡಿ ತನಿಖಾ ಸಂಸ್ಥೆಗೆ ದೂರು ಸಲ್ಲಿಸಿ: ಕಾಂಗ್ರೆಸ್

ಬೆಳಿಗ್ಗೆ ಸುಮಾರು ೪.೩೦ರ ಸುಮಾರಿಗೆ ರೈಲು ಶಿರಾಲಿ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ತಲುಪಿದಾಗ ಬಾಬು ಪಡ್ತಿ ಶೌಚಾಲಯಕ್ಕೆ ತೆರಳಿದ್ದರು. ಬಳಿಕ ಬೋಗಿಯಲ್ಲಿ ಕೈ ತೊಳೆಯುವ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದು ನಿಯಂತ್ರಣ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪುತ್ರ ಅಕ್ಷಯ ಪಡ್ತಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Hotels inspected/ ಎಲ್‌ಪಿಜಿ ದುರ್ಬಳಕೆ ತಡೆಗೆ ಭಟ್ಕಳದಲ್ಲಿ ಹೋಟೆಲ್‌ಗಳ ತಪಾಸಣೆ