ಭಟ್ಕಳ: ಮತ್ತೊಬ್ಬರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಕೋಮುಭಾವನೆ ಕೆರಳಿಸುವ ಸಂದೇಶಗಳನ್ನು ಹರಡುತ್ತಿದ್ದ ಆರೋಪದಡಿ ಭಟ್ಕಳ (Bhatkal) ತಾಲೂಕಿನ ಉತ್ತರಕೊಪ್ಪದ ಯುವಕನನ್ನು ಪೊಲೀಸರು ಪತ್ತೆಹಚ್ಚಿದ್ದು, ಆತನ ಮೊಬೈಲ್ ಫೋನ್‌ ವಶಕ್ಕೆ ಪಡೆದಿದ್ದಾರೆ (Mobile phone seized).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರಕೊಪ್ಪ ನಿವಾಸಿ ಈಶ್ವರ ಕೃಷ್ಣ ನಾಯ್ಕ (೨೮) ಆರೋಪಿ. ಶಿಲ್ಪಿ ಕೆಲಸ ಮಾಡಿಕೊಂಡಿರುವ ಈತ ‘ರೋಹಿತ್ ಶೆಟ್ಟಿ’ ಎನ್ನುವ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ. ಭಟ್ಕಳದ ಮುರಿನಕಟ್ಟೆ (Murinakatte) ವಿವಾದವನ್ನು ಇಟ್ಟುಕೊಂಡು ಅನ್ಯಕೋಮಿನ ವಿರುದ್ಧ ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ ಎನ್ನಲಾಗಿದೆ.

Mari jatra/ ಸಾಂಪ್ರದಾಯಿಕ ವೈಭವದ ಸಂಕೇತ: ಭಟ್ಕಳದ ಮಾರಿ ಜಾತ್ರೆ

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದ್ದ ಪೊಲೀಸರು, ಸೈಬರ್ ತಂತ್ರಜ್ಞಾನದ (cyber technology) ನೆರವಿನಿಂದ ಈ ನಕಲಿ ಖಾತೆಯ ಮೂಲವನ್ನು ಶೋಧಿಸಿದ್ದಾರೆ. ಬಳಿಕ ಆರೋಪಿಯನ್ನು ಗುರುತಿಸಿ ಆತನ ಮೊಬೈಲ್ ಜಪ್ತಿ ಮಾಡಿದ್ದಾರೆ (Mobile phone seized). ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷಾಧಾರಗಳನ್ನು (digital evidences) ಪರಿಶೀಲಿಸಲಾಗುತ್ತಿದೆ.

Mari jatra/ ಮಾರಿಯಮ್ಮನ ಬಿಂಬ ಪೂರ್ಣ: ಉಡಿ ತುಂಬಿದ ಮುತ್ತೈದೆಯರು