ಭಟ್ಕಳ: ಉತ್ತರ ಕನ್ನಡ (Uttara Kannada) ನಿನಾದ ಕಲ್ಚರಲ್ ಅಕಾಡೆಮಿ ಭಟ್ಕಳ ಅವರು ಹೊಸ ವರ್ಷದ ಆರಂಭ ಯುಗಾದಿಯಂದು (Ugadi) ಉತ್ಥಾನ ಕಲಾ ಭವನದಲ್ಲಿ ವಿಶೇಷವಾಗಿ ಯುಗಾದಿ ಸಾಹಿತ್ಯ ಸಂಭ್ರಮ-೨೦೨೬ (Literary Festival) ಎಂಬ ಕಾರ್ಯಕ್ರಮ ಆಯೋಜಿಸುತ್ತಿದ್ದು, ಆಸಕ್ತ ಪ್ರತಿಭಾನ್ವಿತ ಕವಿಗಳಿಗಾಗಿ ಅವರ ಸ್ವರಚಿತ ಕವನ ವಾಚಿಸಲು ‘ಕವಿ ಕಾವ್ಯ ಸಿಂಚನ’ದಲ್ಲಿ ಅವಕಾಶ ನೀಡಲಾಗುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯಾವುದೇ ಭಾಗದ ಕವಿಗಳು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ಕವಿಗಳು ಮುಂಚಿತವಾಗಿ ತಮ್ಮ ಕವನದೊಂದಿಗೆ ಸಂಪರ್ಕಿಸಲು ಕೋರಿದೆ. ಸಂಪರ್ಕಕ್ಕೆ ಕೊನೆಯ ದಿನ ಮಾರ್ಚ ೧೫. ಯುಗಾದಿ ಸಾಹಿತ್ಯ ಸಂಭ್ರಮದಲ್ಲಿ (Literary Festival) ಭಾಗವಹಿಸುವ ಕವಿಗಳಿಗೆ ಆಮಂತ್ರಣ ವಾಟ್ಸಾಪ್ ಮೂಲಕ ಕಳಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಸಂಚಾಲಕರು – ರೇಷ್ಮಾ ಉಮೇಶ, ಉಮೇಶ ಮುಂಡಳ್ಳಿ (೯೯೪೫೮೪೦೫೫೨) ಸಂಪರ್ಕಿಸುವುದು.

Women’s Day / ಭಟ್ಕಳ ಬಿಜೆಪಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ