ಭಟ್ಕಳ: ಹಿಂದು ಸಮ್ಮೇಳನ ಸಮಿತಿ ಯಲ್ವಡಿಕವೂರು ವತಿಯಿಂದ ಹಿಂದು ಸಮ್ಮೇಳನವು (Hindu Sammelan) ಭಟ್ಕಳ (Bhatkal) ತಾಲೂಕಿನ ಯಲ್ವಡಿಕವೂರು ಹೆದ್ದಾರಿ ಜಟ್ಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರದಂದು ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಹಿಂದು ವಕ್ತಾರ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ ‘ ಭಾರತದ ಚರಿತ್ರೆಯಲ್ಲಿ ೫೪ ವರ್ಷ ಸುದೀರ್ಘವಾಗಿ ಆಳ್ವಿಕೆ ಮಾಡಿದ ಗೇರುಸೊಪ್ಪ ರಾಣಿ ಚೆನ್ನಭೈರಾದೇವಿ (Chennabhaira Devi) ಒಬ್ಬಳೇ ಸತತ ೨೪ ಬಾರಿ ಭಾರತದ ಕಡಲ ತದಡಿಯನ್ನು ರಕ್ಷಿಸಿದ ರಾಣಿ. ನಮ್ಮ ಮಣ್ಣಿನ ನಮ್ಮದೇ ಜನರು ರಾಣಿಯ ಸೋಲಿಗೆ ಕಾರಣ. ದೇಶದಲ್ಲಿ ಸ್ವಾರ್ಥಿಗಳಿಗೆ ಏನೂ ಕಡಿಮೆ ಇಲ್ಲ ಎಂದರು.
Hit and run/ ಮುರ್ಡೇಶ್ವರದಲ್ಲಿ ಹಿಟ್ ಎಂಡ್ ರನ್
ಹಾಡುವಳ್ಳಿ ಸಂಗೀತಪುರದ ಇತಿಹಾಸ ನಮಗೆ ತಿಳಿದಿಲ್ಲ. ಕಾರಣ ನಾವೆಲ್ಲ ಮರೆತು ಹೋಗುತ್ತೇವೆ. ರಾಣಿಯ ಒಂದು ಸ್ಮಾರಕವನ್ನಾದರು ಇಟ್ಟುಕೊಂಡಿದ್ದೀರಾ ಇಲ್ಲ. ಇತಿಹಾಸ ನೆನಪಿಸಿಕೊಂಡು ಪುನಃ ಧರ್ಮ ಬೆಳೆದು ನಿಲ್ಲಲು ಇಂತಹ ಹಿಂದು ಸಮ್ಮೇಳನ (Hindu Sammelan) ಆಯೋಜನೆಯ ಉದ್ದೇಶ ಆಗಿದೆ. ಮನೆಯಿಂದಲೇ ಧರ್ಮದ ಜಾಗೃತಿ ಕಾರ್ಯ ಆಗಬೇಕು. ಇನ್ನು ೮೦% ಜನರಿಗೆ ಧರ್ಮದ ಜಾಗೃತಿ, ಅದರ ವಿಸ್ತರಣೆ ತಿಳಿಯಪಡಿಸಬೇಕಿದೆ ಎಂದರು.
labourer/ ಕೂಲಿ ಕೆಲಸಕ್ಕೆ ಹೋದವ ಶವವಾಗಿ ಪತ್ತೆ
ಯಾವುದೇ ರಾಜಕೀಯ ಪಕ್ಷ ಬಂದರೆ ನಮ್ಮ ಧರ್ಮ ಬೆಳೆಯಲಿದೆ ಎನ್ನುವ ಈ ಮಾನಸಿಕತೆ ಬದಲಾಗಬೇಕು. ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಇದ್ದರೆ ನಾವೆಲ್ಲ ಇಲ್ಲಿ ಆರಾಮವಾಗಿ ಮಜಾ ಮಾಡಿಕೊಂಡು ಇರಬಹುದು ಎನ್ನುವ ತಪ್ಪು ಕಲ್ಪನೆಯಲ್ಲಿದ್ದೇವೆ. ಆದರೆ ಬದಲಾಗುವ ರಾಜಕೀಯ ಪರಿಸ್ಥಿತಿಯಲ್ಲಿ ಸಮಾಜವು ಗಟ್ಟಿಯಾಗಬೇಕು. ಧರ್ಮ ಜಾಗೃತವಾಗಬೇಕು ಎಂದು ಹೇಳಿದರು.
bus accident/ ಭಟ್ಕಳಕ್ಕೆ ಬರುತ್ತಿದ್ದ ಸಾರಿಗೆ ಬಸ್ ಅಪಘಾತ: ಒಬ್ಬ ಸಾವು
ಮತಾಂಧ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ಹಿಂದು ಧರ್ಮ ಸಂಘಟಿತವಾದ ಜಾಗೃತವಾಗಬೇಕು. ಛತ್ರಪತಿ ಶಿವಾಜಿ ಆಗಲು ಆತನ ತಾಯಿಯ ಶಿಕ್ಷಣದಿಂದ ಜಗತ್ತನೇ ಗೆದ್ದ ರಾಜ. ತಾಯಂದಿರು ನಮ್ಮ ಮಕ್ಕಳು ಧರ್ಮ ಸಂಸ್ಕೃತಿಯ ಉಳಿವಿಗೆ ಯಾವತ್ತು ಸಜ್ಜುಗೊಳಿಸುತ್ತಾರೋ ಅಂದು ಧರ್ಮ ಬೆಳೆಯಲಿದೆ. ಜಾತಿ ಭೇದವನ್ನು ಬದಿಗಿಡಬೇಕು. ಹಿಂದು ಮೊದಲು ಎನ್ನುವ ಮಾತು ಘೋಷವಾಕ್ಯ ಆಗಬೇಕು. ದೇಶ ಹಿಂದು ದೇಶ ಆಗುವುದಕ್ಕಿಂತ ಮೊದಲು ನಾವು ಎಂದು ಧರ್ಮದ ಉಳಿವಿಗೆ ಅದರ ಪಾಲನೆಗೆ ಸಿದ್ದರಾದರೆ ಹಿಂದು ರಾಷ್ಟ್ರ ಆಗಲಿದೆ ಎಂದರು.
Memorandum/ ಮಾರಿಕಾಂಬಾ ದೇವಸ್ಥಾನದ ಎದುರು ರಂಜಾನ್ ಅಂಗಡಿ ಹಾಕದಿರಲು ಮನವಿ
ಸಮಿತಿಯ ಅಧ್ಯಕ್ಷ ಉಮೇಶ ನಾಯ್ಕ ಸರ್ಪನಕಟ್ಟೆ ಮಾತನಾಡಿ ‘ಗ್ರಾಮ ಗ್ರಾಮದಲ್ಲಿ ಹಿಂದುತ್ವ ಕಾರ್ಯಕ್ರಮ ಧರ್ಮ ಆಗಬೇಕಿದೆ. ಕೇವಲ ಕೇಸರಿ ಶಲ್ಯಕ್ಕೆ ಸೀಮಿತ ಆಗಬಾರದು. ಸರ್ಪನಕಟ್ಟೆಯು ಹಿಂದು ಸಂಘಟನೆಯ ಸಂಪದ್ಭರಿತ ಹಾಗೂ ಫಲವತ್ತಾದ ಗ್ರಾಮ ನಮ್ಮದು. ಆದರೆ ಕಾಲ ಘಟ್ಟದಲ್ಲಿ ನಮ್ಮ ಧರ್ಮದ ವ್ಯಾಖ್ಯಾನ ಬದಲಾಗುತ್ತಿದ್ದು, ಕಾರಣ ಯಾರೋ ಭಜರಂಗಿ ಹಾಗೂ ಹಿಂದು ಹುಲಿ ಎನ್ನುವವರ ಹಿಂದೆ ಹೋಗದೇ ನಿತ್ಯ ಧರ್ಮದ ಆಚರಣೆಯಾಗಬೇಕಿದೆ ಎಂದರು.
arrested/ ಜಾನುವಾರು ಸಾಗಾಟ: ಭಟ್ಕಳದಲ್ಲಿ ಇಬ್ಬರ ಬಂಧನ
ಸ್ವಾತಿ ಐತಾಳ ಹಾಗೂ ಶ್ರೀಧರ ವೈಯಕ್ತಿಕ ಗೀತೆಯನ್ನು ಹಾಡಿದರು. ಜಯಂತ ನಾಯ್ಕ ಬೆಣಂದೂರು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ ಮಾತನಾಡಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಕೀಲ ಶಂಕರ ನಾಯ್ಕ ವಂದಿಸಿದರು.
Lok Adalat/ ಭಟ್ಕಳ ಲೋಕ ಅದಾಲತ್ನಲ್ಲಿ ೧೪೦೨ ಪ್ರಕರಣ ಇತ್ಯರ್ಥ
ಇದಕ್ಕೂ ಮೊದಲು ಇಲ್ಲಿನ ಸರ್ಪನಕಟ್ಟೆ ಶ್ರೀ ವಾಸುಕೀ ಸರ್ಪ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಣಂದೂರು ಕ್ರಾಸನ ಯಲ್ವಡಿಕವೂರು ಹೆದ್ದಾರಿ ಜಟ್ಟಿಗೇಶ್ವರ ದೇವಸ್ಥಾನದ ಆವರಣದ ತನಕ ನಡೆಯಿತು.
hit by scooter/ ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧ ಸಾವು



