ಕಾರವಾರ: ಭಟ್ಕಳ ನಗರ (Bhatkal city) ಭಾಗದಲ್ಲಿ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುರಿನಕಟ್ಟೆಯ (Murinakatte) ನಿರ್ಮಾಣದಲ್ಲಿ ಆಗಬೇಕಾದ ಕೆಲವು ಬದಲಾವಣೆಗಳ ಬಗ್ಗೆ ನೀಡಿದ ಭರವಸೆಯು ಇಲ್ಲಿಯ ತನಕ ಈಡೇರಿಲ್ಲ ಎಂದು ಭಟ್ಕಳ ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟ (Hindu organisations) ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಉತ್ತರ ಕನ್ನಡ (Uttara Kannada) ಜಿಲ್ಲಾಧಿಕಾರಿಗೆ ಮನವಿಪತ್ರ (Memorandum) ಸಲ್ಲಿಸಿರುವ ನಿಯೋಗ, ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮನವಿಯಲ್ಲಿ ತಿಳಿಸಿರುವಂತೆ, ನೂತನವಾಗಿ ನಿರ್ಮಾಣವಾದ ಮುರಿನಕಟ್ಟೆಯನ್ನು (Murinakatte) ಹಾನಿ ಮಾಡಿದ ಘಟನೆಯ ನಂತರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾ ಹೆ ಪ್ರಾಧಿಕಾರದ (NHAI) ಯೋಜನಾಧಿಕಾರಿ ಭಟ್ಕಳದ ಹಿಂದೂ ಮುಖಂಡರಿಗೆ ರಾಷ್ಟ್ರೀಯ ಹೆದ್ದಾರಿ (National Highway) ಮಧ್ಯದಲ್ಲಿ ಮೂಲಸ್ಥಳದಲ್ಲಿ ೨ ಮೀ ಅಗಲ ಮತ್ತು ೧೫ ಅಡಿ ಉದ್ದನೆಯ ಅಳತೆಯಲ್ಲಿ ೩ ಅಡಿ ಎತ್ತರದ ಸಿಮೆಂಟ್ ಕಟ್ಟೆ ಮತ್ತು ಮೇಲೆ ಸ್ಟೀಲ್ ಗ್ರೀಲ್ ಅಳವಡಿಸಿ ನಾಮಫಲಕ ಮಾಡಿಕೊಡುವ ಭರವಸೆ ನೀಡಿದ್ದರು. ಮುರಿನಕಟ್ಟೆಯ ನಿರ್ಮಾಣ ಅವರೇ ಮಾಡಲು ಯೋಚಿಸಿ ಮಾಡಿದ್ದರೂ ಸಹ ನಮ್ಮ ಬೇಡಿಕೆಯಂತೆ ಕೆಲವೊಂದು ಸಂಗತಿ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಇರುವ ರೀತಿಯಲ್ಲಿ ಇರದಿದ್ದ ಕಾರಣ ಭಟ್ಕಳದ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
mobile phone seized/ ಭಟ್ಕಳ ಯುವಕನ ಮೊಬೈಲ್ ಜಪ್ತಿ
ಈ ಅಸಮಾಧಾನವನ್ನು ಸರಿಪಡಿಸುವ ಉದ್ದೇಶದಿಂದ ಸಹಾಯಕ ಆಯುಕ್ತರು, ಪೊಲೀಸ್ ಉಪ ಅಧೀಕ್ಷಕರು ಮತ್ತು ರಾ ಹೆ ಪ್ರಾಧಿಕಾರದ ಯೋಜನಾಧಿಕಾರಿ ನೇತೃತ್ವದಲ್ಲಿ ಭಟ್ಕಳದ ಐಬಿಯಲ್ಲಿ ಜೂನ್ ೧೫ರಂದು ಹಿಂದೂ ಮುಖಂಡರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುರಿನಕಟ್ಟೆಯ ವಿಷಯದಲ್ಲಿ ಆಗಿರುವ ನ್ಯೂನತೆಗಳನ್ನು ಸುಧೀರ್ಘವಾಗಿ ಚರ್ಚಿಸಿ ಕೊನೆಯದಾಗಿ ಮೂರು ಬದಲಾವಣೆ ಬಗ್ಗೆ ಬೇಡಿಕೆ ಇಡಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
snatching gold chain/ ಮುರ್ಡೇಶ್ವರದಲ್ಲಿ ಚಿನ್ನದ ಸರ ಸುಲಿಗೆ ಆರೋಪಿ ಸೆರೆ
ಬೇಡಿಕೆಗಳೇನು?
೧. ಪ್ರಸ್ತುತ ಮುರಿನಕಟ್ಟೆಯ ತಳಪಾಯ ಡಿವೈಡರಿನಿಂದ ಕೇವಲ ೮ ಇಂಚು ಇದ್ದು, ಅದನ್ನು ೨ ಅಡಿಯ ಎತ್ತರ ಮಾಡುವುದು.
೨. ಮುರಿನಕಟ್ಟೆಯನ್ನು ಹೊರತುಪಡಿಸಿ ಮುರಿನಕಟ್ಟೆಯ ಮುಂಭಾಗ ಮತ್ತು ಹಿಂಭಾಗದುದ್ದಕ್ಕೂ ಸುಮಾರು ೫೦ ಮೀಟರ್ ಉದ್ದ ಡಿವೈಡರ್ನಲ್ಲಿ ಅಳವಡಿಸಿರುವ ಸ್ಟೀಲ್ ಗ್ರೀಲ್ನ ಎತ್ತರ ಮುರಿನಕಟ್ಟೆಯ ಗ್ರೀಲ್ನ ಎತ್ತರಕ್ಕೆ ಸರಿಸಮಾನವಾಗಿದ್ದು, ಇದರಿಂದ ಮುರಿನಕಟ್ಟೆಯು ಗೋಚರವಾಗದ ಕಾರಣ ಡಿವೈಡರ್ನಲ್ಲಿ ಹಾಕಿದ ಸ್ಟೀಲ್ ಗ್ರೀಲ್ನ ಅಳತೆಯನ್ನು ಒಂದುವರೆ ಅಡಿ ಕಡಿಮೆಗೊಳಿಸುವುದು.
3. ಪ್ರಸ್ತುತ ನಿರ್ಮಾಣ ಮಾಡಲಾದ ಮುರಿನಕಟ್ಟೆಗೆ “ಮುರಿನಕಟ್ಟೆ” ನಾಮಫಲಕ ಅಳವಡಿಸಿ ಸ್ಥಳೀಯ ಹಿಂದೂಗಳ ಧಾರ್ಮಿಕ ಶ್ರದ್ಧೆಯಂತೆ ಪೂಜಾಕಾರ್ಯಗಳು ನಡೆಸಲು ಎಲ್ಲಾ ರೀತಿಯ ಅನುಕೂಲಕರವಾಗುವಂತೆ ಮಾಡುವುದು.
Illegal cattle transport/ ಜಾನುವಾರು ಅಕ್ರಮ ಸಾಗಣೆ: ಭಟ್ಕಳದಲ್ಲಿ ನಾಲ್ವರ ಬಂಧನ
ಈ ಮೂರೂ ಬೇಡಿಕೆಗಳನ್ನು ಮುಖ್ಯ ಸಹಾಯಕ ಆಯುಕ್ತರು, ಪ್ರಾಧಿಕಾರದ ಯೋಜನಾಧಿಕಾರಿ ಮತ್ತು ಪೊಲೀಸ್ ಉಪ ಅಧೀಕ್ಷಕರು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಅತೀ ಶೀಘ್ರದಲ್ಲಿ ಈ ಮೇಲಿನ ಬೇಡಿಕೆಗಳನ್ನು ಈಡೇರಿಸಿ ಮಾರಿ ಹೊರೆ ತೆಗೆಯಲು ಹಾಗೂ ಪೂಜಾ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ನಮ್ಮ ಹಿಂದೂಗಳ ಬೇಡಿಕೆಯಂತೆ ಈ ಮೇಲಿನ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು, ಸ್ಥಳೀಯ ಗ್ರಾಮಸ್ಥರ ಹಾಗೂ ಹಿಂದೂಗಳ ಅಸಮಾಧಾನಕ್ಕೆ ಮತ್ತು ಆಕ್ರೋಶಕ್ಕೆ ಕಾರಣವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
World Devadiga Convention/ ವಿಶ್ವ ದೇವಡಿಗ ಸಮಾವೇಶ: ಭಟ್ಕಳದಲ್ಲಿ ಪೂರ್ವಭಾವಿ ಸಭೆ
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಮನವಿ ಸ್ವೀಕರಿಸಿದರು. ನಿಯೋಗದಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣ ವೇದಿಕೆ ಭಟ್ಕಳ ತಾಲೂಕು ಸಂಯೋಜಕ ಜಯಂತ, ಮಾಜಿ ಸಚಿವ (former minister) ಶಿವಾನಂದ ನಾಯ್ಕ (Shivanand Naik), ಹಿಂದೂ ಮುಖಂಡರಾದ ಗೋವಿಂದ ನಾಯ್ಕ, ಕುಮಾರ ನಾಯ್ಕ, ಶ್ರೀನಿವಾಸ ನಾಯ್ಕ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ ಹಾಗೂ ಸುಬ್ರಾಯ ದೇವಾಡಿಗ ಗ್ರಾಮದ ಪ್ರಮುಖರು ಇದ್ದರು.
Karate Competition/ ತುಷಾರ ಮಹಾಲೆ ಸಹಿತ ೧೬ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ


