ಭಟ್ಕಳ: ತಾಲೂಕಿನ ಪಡುಶಿರಾಲಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿಪ್ಪಿಕಲ್ಲು ತೆಗೆಯಲು ನದಿಗೆ ಹೋಗಿ ದುರಂತ ಸಾವಿಗೀಡಾಗಿದ್ದ (Chippikallu Disaster) ೧೧ ಜನರ ಸಂತ್ರಸ್ತ ಮಕ್ಕಳನ್ನು ಭೇಟಿಯಾದ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ಪಾಠಕ್ಕೆ ಸಂಬಂಧಿತ ಉ ಪಕರಣಗಳು ಹಾಗೂ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡಿ ಮಾನವೀಯ (humanitarian) ನೆಲೆಯಲ್ಲಿ ಸ್ಪಂದಿಸುವ ಕಾರ್ಯ ಮಾಡಿದೆ. ಸಂತ್ರಸ್ತ ಮಕ್ಕಳಿಗೆ ಬಟ್ಟೆ, ಬ್ಯಾಗು, ನೋಟ್ ಬುಕ್, ಕಂಪಾಸ್ ಬಾಕ್ಸ್, ರೇನ್ ಕೋಟ್, ಛತ್ರಿ, ನೋಟ್ ಬುಕ್ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ನೀಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ, ಅದೊಂದು (Chippikallu Disaster) ಕರಾಳ ಘಟನೆಯಾಗಿದ್ದು ನೀವು ಕಳೆದುಕೊಂಡ ನಿಮ್ಮ ಪಾಲಕರನ್ನ ತಂದುಕೊಡುವ ಶಕ್ತಿ ನಮಗಿಲ್ಲ. ನಿಮ್ಮ ಮುಂದಿನ ಬದುಕನ್ನು ಇನ್ನೂ ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ನೀವು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಯಾವುದೇ ಕಾರಣಕ್ಕೂ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸದೆ, ನೀವು ಆಯ್ಕೆ ಮಾಡಿಕೊಂಡ ಶಿಕ್ಷಣ ಪೂರ್ಣಗೊಳಿಸುವ ಮೂಲಕ ಬದುಕಿನ ಭದ್ರತೆಗಾಗಿ ಉದ್ಯೋಗವನ್ನು ಕಂಡುಕೊಳ್ಳಬೇಕಾಗಿದೆ. ಆ ಮೂಲಕ ಕಳೆದುಕೊಂಡ ಪಾಲಕರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯ ಮಾಡಬೇಕಾಗಿದೆ. ನಾವೆಲ್ಲ ಮಾನಸಿಕವಾಗಿ ಮನುಷ್ಯತ್ವದ (humanitarian) ನೆಲೆಯಲ್ಲಿ ನಿಮ್ಮ ಜೊತೆ ಇರುತ್ತೇವೆ ಎಂದರು.
Kannada language/ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಗೆ ಶೇ ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪಿ ಆರ್ ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಸಾಹಿತಿಗಳಾದ ಶಂಭು ಹೆಗಡೆ, ಶ್ರೀಧರ ಶೇಟ್, ಕಸಾಪ ಜಿಲ್ಲಾ ಪದಾಧಿಕಾರಿ ಪಿ ಎಮ್ ಮುಕ್ರಿ, ಪತ್ರಕರ್ತ ವಿಷ್ಣು ದೇವಡಿಗ, ಅಕ್ಷಯಗಿರಿ ಗೋಸಾವಿ, ಮಂಜುನಾಥ ಅಂಬಿಗೇರ, ಊರ ಪ್ರಮುಖರಾದ ವಾಸು ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ನಾಯ್ಕ, ವಿದ್ಯಾರ್ಥಿಗಳಾದ ತನ್ಮಯಿ, ಯುಗ, ಯಾಮಿನಿ, ಯಶಸ್ವಿ, ಕಾಂಚನ, ಸಿಂಚನಾ, ಚೇತನಾ, ತಮನ್ನ, ಸೋನಿಯಾ, ಕೌಶಿಕ, ಉನ್ನತಿ, ಉಲ್ಲಾಸ, ಕೀರ್ತನಾ, ಸವಿತಾ ವಿದ್ಯಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.
Humanitarian/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ದಿನಸಿ ಸಾಮಗ್ರಿ ವಿತರಣೆ

