ಭಟ್ಕಳ: ತಾಲೂಕಿನ ಶಿರಾಲಿ ಸಮೀಪದ ಬೆರ್ಮುಮನೆ ಗ್ರಾಮದ ನಿವಾಸಿ ಲಚ್ಚಯ್ಯ ದುರ್ಗಪ್ಪ ನಾಯ್ಕ (೬೫) ಅವರು ಬೆಂಕಿಯಿಂದ ಸುಟ್ಟು ಮೃತಪಟ್ಟ ಘಟನೆ ವರದಿಯಾಗಿದೆ. ಈ ಕುರಿತು ಮೃತರ ಪತ್ನಿ ಮಾಸ್ತಮ್ಮ ಲಚ್ಚಯ್ಯ ನಾಯ್ಕ (೫೫) ಅವರು ಭಟ್ಕಳ ಗ್ರಾಮೀಣ (Bhatkal rural) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಿಸಿದ್ದಾರೆ (Case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೂರಿನ ಪ್ರಕಾರ, ಆಗಸ್ಟ್ ೬ರಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೬.೩೦ರ ನಡುವಿನ ಅವಧಿಯಲ್ಲಿ ಲಚ್ಚಯ್ಯ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಬೇಸರಗೊಂಡು ಬೆಂಕಿ ಹಚ್ಚಿಕೊಂಡಿರಬಹುದು. ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿರಬಹುದು. ಸಾವಿನ ಕುರಿತು ಯಾವುದೇ ಅನುಮಾನ ಅಥವಾ ಸಂಶಯ ಇಲ್ಲ ಎಂದು ಪತ್ನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಮೊದಲ ಬಾರಿಗೆ ಭಟ್ಕಳದಲ್ಲಿ ಬಹಿರಂಗ ಅಸಮಾಧಾನ
ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದ್ದು (Case registered), ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ (investigation) ನಡೆಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
