ಭಟ್ಕಳ: ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಮಾರಿ ಹಬ್ಬವು (Mari jatra) ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾಲಿಕೋಡಿ ಸಮುದ್ರ ತೀರದಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಎರಡು ದಿನಗಳಿಂದ ಮಾರಿಕಾಂಬಾ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಮಾರಿ ದೇವಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಗುರುವಾರ ಎರಡನೇ ದಿನವೂ ಮುಂಜಾನೆಯಿಂದಲೇ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಕಿಲೋ ಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಹಣ್ಣು-ಕಾಯಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

Public tribute program/ ಡಾ ಸುರೇಶ ವಿ ನಾಯಕರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಾಳೆ

ಎರಡನೇ ದಿನ ಊರಿನವರು ಮಾರಿ ಹಬ್ಬ ಆಚರಿಸುವ ಸಂಪ್ರದಾಯದಂತೆ ತಾಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಮನೆಗಳಲ್ಲಿ ಮಾರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೋಳಿ ಬಲಿ ನೀಡಿ ಹಬ್ಬ ಆಚರಿಸಿದರು. ಸಂಜೆ ಸುಮಾರು ೪.೩೦ಕ್ಕೆ ದೇವಸ್ಥಾನದಲ್ಲಿ ಮಹಾಮಂಗಳಾರತಿ ಹಾಗೂ ವಿಸರ್ಜನಾ ಪೂಜೆ ನೆರವೇರಿದ ಬಳಿಕ, ಮಾರಿಯಮ್ಮನನ್ನು ಗದ್ದುಗೆಯಿಂದ ಇಳಿಸಿ ಭಕ್ತರು ತಲೆಯ ಮೇಲೆ ಹೊತ್ತು ಜಯಘೋಷಗಳ ನಡುವೆ ಭವ್ಯ ಮೆರವಣಿಗೆಯಲ್ಲಿ ಸಾಗಿಸಿದರು. ಪೇಟೆ ಮುಖ್ಯರಸ್ತೆ, ಬಂದರು ರಸ್ತೆ, ಹನುಮಾನನಗರ ಹಾಗೂ ಕರಿಕಲ್ ಮಾರ್ಗವಾಗಿ ಮೆರವಣಿಗೆ ಜಾಲಿಕೋಡಿ ಸಮುದ್ರ ತೀರ ತಲುಪಿತು.

Minister Laxman Savadi/ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸ: ಭಟ್ಕಳಕ್ಕಿಲ್ಲ ಭೇಟಿ, ಜನ ಬೇಸರ 

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ರಸ್ತೆ ಬದಿಯಲ್ಲಿ ಕೋಳಿ ಬಲಿ ನೀಡಿ, ರೋಗ-ರುಜಿನಗಳು ದೂರವಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿದರು. ದೇವಿಯ ಹೂವಿನ ಪ್ರಸಾದವನ್ನು ಭಕ್ತರು ಭಕ್ತಿಭಾವದಿಂದ ಸ್ವೀಕರಿಸಿದರು. ಸಂಜೆ ಸುಮಾರು ೬.೩೦ಕ್ಕೆ ಜಾಲಿಕೋಡಿ ಸಮುದ್ರ ತೀರ ತಲುಪಿದ ಮಾರಿ ದೇವಿಯ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಸ್ವಯಂಸೇವಕರು ಹಾಗೂ ಭಕ್ತರ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಇದರೊಂದಿಗೆ ಈ ವರ್ಷದ ಮಾರಿ ಹಬ್ಬಕ್ಕೆ (Mari jatra) ತೆರೆ ಬಿದ್ದಿತು. ವಿಸರ್ಜನೆಗೆ ಬಂದಂತ ಭಕ್ತಾದಿಗಳ ಅನುಕೂಲಕ್ಕಾಗಿ ಟೆಂಪೋ ಚಾಲಕರ ಸಂಘದಿಂದ ಉಚಿತವಾಗಿ ಟೆಂಪೋ ವ್ಯವಸ್ಥೆ ಕಲ್ಪಿಸಲಾಯಿತು.

Mariyamma/ ಮಾರಿಯಮ್ಮನ ದರ್ಶನಕ್ಕೆ ಮೊದಲ ದಿನ ಭಕ್ತಸಾಗರ