ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ಭಟ್ಕಳ (Bhatkal)ದಲ್ಲಿ ರವಿವಾರ ೪೩ನೇ ಪದವಿ ಪ್ರದಾನ ಸಮಾರಂಭ (Convocation Ceremony) ಹಾಗೂ ೪೬ನೇ ವಾರ್ಷಿಕೋತ್ಸವವನ್ನು (Annual Gathering) ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು, ಅವರ ಪೋಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಆಡಳಿತ ಮಂಡಳಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಗಣ್ಯ ಅತಿಥಿಗಳು ಭಾಗವಹಿಸಿ ಸಮಾರಂಭದ ಮೆರುಗನ್ನು ಹೆಚ್ಚಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಲೇಜಿನ ಪ್ರಾಂಶುಪಾಲ ಡಾ ಕೆ ಫಜ್ಲುರ್ ರಹಮಾನ್ ಸ್ವಾಗತ ಭಾಷಣ ಮಾಡಿ, ವಾರ್ಷಿಕ ವರದಿಯನ್ನು ಮಂಡಿಸಿದರು. ಅತಿಥಿಗಳ ಪರಿಚಯವನ್ನು ಕಾಲೇಜಿನ ರಿಜಿಸ್ಟ್ರಾರ್ ಪ್ರೊ ಜಾಹಿದ್ ಖರೂರಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶಾಹಿದ್ ಅಬ್ಬಾಸ್ ಮಿರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನವೋದ್ಯಮ, ತಂತ್ರಜ್ಞಾನ ಹಾಗೂ ಉದ್ಯಮ ಸನ್ನದ್ಧತೆಯ ಮಹತ್ವವನ್ನು ವಿವರಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯ ಮುಖ್ಯ ನವೋದ್ಯಮ ಅಧಿಕಾರಿ  ಗೋಕುಲ್ ಬಿ ಅಲೆಕ್ಸ್, ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

campaign/ ಮನೆಗೊಂದು ಗಿಡ ಅಭಿಯಾನಕ್ಕೆ ಚಾಲನೆ

ಈ ಸಂದರ್ಭದಲ್ಲಿ ಎಐಟಿಎಂ ಹಾಗೂ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರದ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ಈ ಒಪ್ಪಂದವು ವಿದ್ಯಾರ್ಥಿಗಳಿಗೆ ತರಬೇತಿ, ಇಂಟರ್ನ್‌ಶಿಪ್, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ನೆರವಾಗಲಿದೆ. ಶೈಕ್ಷಣಿಕ ಸಾಧನೆ, ನವೋದ್ಯಮ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

sewage work/ ಭಟ್ಕಳ ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾದ ಒಳಚರಂಡಿ ಕಾಮಗಾರಿ

ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಹಾಕ್ ಶಾಬಂದ್ರಿ ಹಾಗೂ ಎಐಟಿಎಂ (AITM) ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ  ಮೊಹಮ್ಮದ್ ಅನ್ಸಾರ್ ದಮ್ದಾ ಅಬು ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ ಪ್ರಾಂಶುಪಾಲರು, ಬೋಧಕ ಹಾಗೂ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಎಎಚ್‌ಎಂ (AHM)ನ ಉಪಾಧ್ಯಕ್ಷ ಡಾ ಜುಬೈರ್ ಕೋಲಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ  ಮೊಹಮ್ಮದ್ ಇಸ್ಮಾಯಿಲ್ ಜುಕಾಕು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಮಿಡಿದ ಮುರುಡೇಶ್ವರ ಆಟೋ ಚಾಲಕರು 

ಅಧ್ಯಕ್ಷೀಯ ಭಾಷಣ ಮಾಡಿದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಉಪಾಧ್ಯಕ್ಷ ಜನಾಬ್ ಮೊಹಮ್ಮದ್ ಸಾದಿಕ್ ಪಿಲ್ಲೂರ, ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಾಂಶುಪಾಲ ಡಾ ಕೆ ಫಜ್ಲುರ್ ರಹಮಾನ್ ಪದವಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಇಂಜಿನಿಯರಿಂಗ್, ಎಂಬಿಎ ಹಾಗೂ ಎಂಸಿಎ ವಿಭಾಗಗಳ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಂಚಾಲಕರಾಗಿದ್ದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಕಿರಣ್ ವಿ ಶಾನಭಾಗ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.

Bhatkal/ ಭಟ್ಕಳದಲ್ಲಿ ಮರಕ್ಕೆ ಬೈಕ್ ಡಿಕ್ಕಿ: ಹಿಂಬದಿ ಸವಾರ ದುರ್ಮರಣ

ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಪ್ರೊ ಶ್ರೀಶೈಲ ಭಟ್,  ಮೊಹಮ್ಮದ್ ಇಯಾದ್ ಹಾಗೂ  ಮೊಹಮ್ಮದ್ ಜೈದ್ ನಿರೂಪಿಸಿದರು. ಈ ಸಮಾರಂಭವು ಎಐಟಿಎಂ (AITM)ನ ಶೈಕ್ಷಣಿಕ ಶ್ರೇಷ್ಠತೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಜಾಗತಿಕ ಸವಾಲುಗಳನ್ನು ಎದುರಿಸಲು ಸಮರ್ಥ ವೃತ್ತಿಪರರನ್ನು ರೂಪಿಸುವ ಸಂಸ್ಥೆಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.

arrested/ ಚಿನ್ನಾಭರಣ ಕದ್ದ ಆರೋಪಿ ಬಂಧನ