ಭಟ್ಕಳ: ಇಲ್ಲಿನ ವಿಶ್ವಕರ್ಮ (Vishwakarma) ಗೆಳೆಯರ ಬಳಗ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮದ ನಿಮಿತ್ತ ಮನೆಗೊಂದು ಗಿಡ ಅಭಿಯಾನದ (campaign) ಈ ವರ್ಷದ ಉದ್ಘಾಟನಾ ಕಾರ್ಯಕ್ರಮವು ಭಟ್ಕಳದ (Bhatkal) ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ (BEO office) ಆವರಣದಲ್ಲಿ ಅನೇಕ ಗಣ್ಯರ ಸಮ್ಮುಖದಲ್ಲಿ ನೆರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವನಮಹೋತ್ಸವದ ದಶಮಾನೋತ್ಸವ (Decennial) ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಮ್ ಎನ್ ನಾಯ್ಕ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಹಾಗೂ ತಾಲೂಕು ಇಸಿಒ (ECO) ಶ್ರೀನಿವಾಸ ನಾಯ್ಕ, ಸಂಘದ ಪರಿಸರ ಕಾಳಜಿಯ ಬಗ್ಗೆ, ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮದ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

sewage work/ ಭಟ್ಕಳ ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾದ ಒಳಚರಂಡಿ ಕಾಮಗಾರಿ

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ ಉಮೇಶ ಕೆರೆಕಟ್ಟೆ ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಿತನುಡಿಗಳನ್ನಾಡಿದರು. ನಿವೃತ್ತ ಯೋಧ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮತ್ತು ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ನಾಯ್ಕ ಮಾತನಾಡಿ, ಈ ವಿಶಿಷ್ಟ ಕಾರ್ಯಕ್ರಮದ ಜೊತೆಗೆ ಸಂಘದ ಇನ್ನಷ್ಟು ಕಾರ್ಯಕ್ರಮಗಳ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಪ್ರಶಂಸೆ ವ್ಯಕ್ತ ಪಡಿಸಿದರು.

Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಮಿಡಿದ ಮುರುಡೇಶ್ವರ ಆಟೋ ಚಾಲಕರು 

ವಿಶ್ವಕರ್ಮ ಗೆಳೆಯರ ಬಳಗದ ಅಧ್ಯಕ್ಷ ಗಜಾನನ ಕೆ ಆಚಾರ್ಯ ಮಾತನಾಡಿ, ಸಂಘದ ಅನೇಕ ಸಾಮಾಜಿಕ ಕಾರ್ಯಕ್ರಮಗಳಿಂದ ಇಂದು ಸದೃಢವಾಗಿ ಸಂಘವು ೧೮ ವರ್ಷಗಳು ಪೂರೈಸಲು ಸಾಧ್ಯವಾಗಿದೆ. ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಬೆಂಬಲದಿಂದ ನಮ್ಮ ತಂಡ ಮುಂದೆ ಸಾಗುತ್ತಿದೆ. ಎಲ್ಲರ ಸಹಕಾರ ಸದಾ ಇರಲಿ ಎಂದರು. ಸಂಘದ ಮಾಜಿ ಅಧ್ಯಕ್ಷರು, ಮಂಜುನಾಥ ಆಚಾರ್ಯ ಮುಂಬೈ, ದೇವಿದಾಸ ಆಚಾರ್ಯ, ಉಮೇಶ ಆಚಾರ್ಯ, ಗಣೇಶ ಆಚಾರ್ಯ ಹಾಗೂ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Bhatkal/ ಭಟ್ಕಳದಲ್ಲಿ ಮರಕ್ಕೆ ಬೈಕ್ ಡಿಕ್ಕಿ: ಹಿಂಬದಿ ಸವಾರ ದುರ್ಮರಣ

ವನಮಹೋತ್ಸವದ ದಶಮಾನೋತ್ಸವದ ಪ್ರಯುಕ್ತ ಮನೆಗೊಂದು ಗಿಡ ಅಭಿಯಾನದ (campaign) ಈ ಕಾರ್ಯಕ್ರಮಕ್ಕೆ ಕಳೆದ ೧೦ ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಘಕ್ಕೆ ಬೆಂಬಲವಾಗಿ ನಿಂತ ಶಿಕ್ಷಕ ಸುರೇಶ ಆಚಾರ್ಯ (ನಿರೂಪಣೆ), ಉಮೇಶ ಆಚಾರ್ಯ (ಭಿತ್ತಿ ಪತ್ರ ಪ್ರಿಂಟಿಂಗ್) ಹಾಗೂ ಗಣೇಶ ಆಚಾರ್ಯ (ವಾಹನ ವ್ಯವಸ್ಥೆ) ಅವರನ್ನು ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ರವಿ ಆರ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಆಚಾರ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

arrested/ ಚಿನ್ನಾಭರಣ ಕದ್ದ ಆರೋಪಿ ಬಂಧನ