ಭಟ್ಕಳ: ನ್ಯಾಯಾಲಯಗಳು ಹೊರಡಿಸುವ ವಾರಂಟ್‌ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಉತ್ತಮ ಸಾಧನೆ ತೋರಿದ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯ ಸಿವಿಲ್ ಹೆಡ್ ಕಾನ್ಸ್‌ಟೇಬಲ್‌ಗಳಾದ ಗಿರೀಶ ಅಂಕೊಲೇಕರ ಮತ್ತು ಉದಯ ನಾಯ್ಕ ಅವರಿಗೆ ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ (police superintendent) ಪ್ರಶಂಸನಾ ಪತ್ರ (Letter of Appreciation) ನೀಡಿ ಸನ್ಮಾನಿಸಲಾಯಿತು (honors).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ದಿಲೀಪ್ ಎಂ ಎನ್ ಪ್ರಶಂಸನಾ ಪತ್ರ ವಿತರಿಸಿದರು. ವಾರಂಟ್ ಜಾರಿ ಕಾರ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ ೯೦ರಷ್ಟು ಯಶಸ್ಸು ಸಾಧಿಸಿರುವ ಇವರ ಸೇವೆಯನ್ನು ಇಲಾಖೆ ವಿಶೇಷವಾಗಿ ಗುರುತಿಸಿದೆ.

Bhatkal Marijathre/ ಆ ೫, ೬ರಂದು ಭಟ್ಕಳ ಮಾರಿಜಾತ್ರೆ 

ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಹೊರಡಿಸಿದ ವಾರಂಟ್‌ಗಳನ್ನು ಜಾರಿಗೊಳಿಸಲು ನಿರಂತರವಾಗಿ ಶ್ರಮಿಸಿ, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಇಬ್ಬರೂ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದರ ಪರಿಣಾಮವಾಗಿ ಹಲವು ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥ ಪ್ರಕ್ರಿಯೆ ವೇಗ ಪಡೆಯಲು ನೆರವಾಗಿದೆ ಎಂದು ಪ್ರಶಂಸನಾ ಪತ್ರದಲ್ಲಿ (Letter of Appreciation) ಉಲ್ಲೇಖಿಸಲಾಗಿದೆ.

Bhatkal/ ಮುಂಡಳ್ಳಿಯಲ್ಲಿ ಯುವ ಮೀನುಗಾರ ಆತ್ಮಹತ್ಯೆ 

ಕರ್ತವ್ಯದ ಮೇಲಿನ ನಿಷ್ಠೆ, ಜವಾಬ್ದಾರಿಯುತ ಕಾರ್ಯವೈಖರಿ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ನೀಡಲಾದ ಈ ಗೌರವವು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮತ್ತೊಂದು ಹೆಮ್ಮೆಯ ಕ್ಷಣವಾಗಿದ್ದು, ಮುಂದೆಯೂ ಇದೇ ಉತ್ಸಾಹದಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾಶಯ ಕೋರಿದ್ದಾರೆ.

Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ