ಭಟ್ಕಳ: ಯುವ ಮೀನುಗಾರನೊಬ್ಬ (Young fisherman) ನೀನು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳ (Bhatkal) ತಾಲೂಕಿನ ಮುಂಡಳ್ಳಿ ಹಾವಳಿಕಂಠದ ಕಪ್ಪಿಮನೆ ನಿವಾಸಿ ಹರೀಶ ಗೋವಿಂದ ಮೊಗೇರ (೩೫) ಸಾವಿಗೆ ಶರಣಾದವರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಮುರ್ಡೇಶ್ವರದ (Murdeshwar) ಬಸ್ತಿಮಕ್ಕಿ ಎಡಬಡ್ರು ಕ್ರಾಸಿನ ವಾಸು ನಾಗಪ್ಪ ಮೋಗೇರ (೫೪) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case registered). ತನ್ನ ಹೆಂಡತಿ ಅಕ್ಕನ ಮಗ ಹರೀಶ ಮೋಗೇರ ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಬೇಸರಗೊಂಡು ಜೂನ್ ೩೦ರ ರಾತ್ರಿ ೧೦ ಗಂಟೆಯಿಂದ ಜುಲೈ ೧ರ ಬೆಳಿಗ್ಗೆ ೮.೪೫ ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಡುಗೆ ಕೋಣೆಯಲ್ಲಿನ ಸೀಲಿಂಗ್ ಪ್ಯಾನ್ ಹಾಕಲು ಅಳವಡಿಸಿದ್ದ ಕಬ್ಬಿಣದ ರಾಡಿಗೆ ಸೀರೆಯಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ



