ಭಟ್ಕಳ: ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಯುವಕನೊಬ್ಬನ ವಿರುದ್ಧ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ (Case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾವಳ್ಳಿ-೨ರ ಕನ್ನಡ ಶಾಲೆ ನಿವಾಸಿ ಹಾಗೂ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಗಣೇಶ ಜಯಂತ ನಾಯ್ಕ (೨೪) ನೀಡಿದ ದೂರಿನ ಮೇರೆಗೆ ದೀವಗಿರಿ ಮಾವಳ್ಳಿ-೨ರ ನಿವಾಸಿ ಹೃತೀಕ ಮಂಜುನಾಥ ನಾಯ್ಕ (೨೭) ವಿರುದ್ಧ ಪ್ರಕರಣ ದಾಖಲಾಗಿದೆ.
judicial custody/ ಭಟ್ಕಳದಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ
ದೂರಿನ ಪ್ರಕಾರ, ಹೃತೀಕ ಈ ಹಿಂದಿನಿಂದಲೂ ಗಣೇಶ ಅವರೊಂದಿಗೆ ದ್ವೇಷ ಹೊಂದಿದ್ದ. ಜುಲೈ ೩ರಂದು ಮಧ್ಯಾಹ್ನ ಸುಮಾರು ೨.೨೦ಕ್ಕೆ ಗಣೇಶ ಅವರು ತಮ್ಮ ಕಾರಿನಲ್ಲಿ ಬ್ಯಾಂಕಿಗೆ ತೆರಳಲು ಕನ್ನಡ ಶಾಲೆ ಕಡೆಯಿಂದ ಬಸ್ತಿ ಮಾರ್ಗವಾಗಿ ಮುರ್ಡೇಶ್ವರದ ಕಡೆಗೆ ಬರುತ್ತಿದ್ದರು. ಈ ವೇಳೆ ಬಸ್ತಿ ರಸ್ತೆಯ ಪಿಎನ್ಇ ಶೋರೂಂ ಸಮೀಪ ಎದುರಿಗೆ ಬಂದ ಹೃತೀಕ ತನ್ನ ಕಾರನ್ನು ಏಕಾಏಕಿ ಗಣೇಶ ಅವರ ಕಾರಿನ ಕಡೆಗೆ ಅತಿ ವೇಗದಲ್ಲಿ ನುಗ್ಗಿಸಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
arrest/ ಭಟ್ಕಳ ಪೊಲೀಸರಿಂದ ಮಂಕಿ ಠಾಣೆಯ ಪಿಎಸೈ ಬಂಧನ ಯಾಕೆ ಗೊತ್ತಾ?
ಡಿಕ್ಕಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗಣೇಶ ಅವರು ತಮ್ಮ ಕಾರಿನ ವೇಗ ಹೆಚ್ಚಿಸಿದರೂ, ಆರೋಪಿಯ ಕಾರು ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಮಾವಳ್ಳಿ-೨ರ ಚಂದ್ರಹಿತ್ತಲ ನಿವಾಸಿ ಮಾರ್ಟಿನ್ ಪ್ರಾನ್ಸಿಸ್ ಲೂಯಿಸ್ ಅವರ ಮನೆಯ ಕಾಂಪೌಂಡ್ ಗೋಡೆಗೆ ಗುದ್ದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಘಟನೆಯಲ್ಲಿ ಕಾರಿಗೆ ಹಾನಿಯಾಗಿದ್ದು, ತನ್ನನ್ನು ಸಾಯಿಸುವ ಉದ್ದೇಶದಿಂದಲೇ ಆರೋಪಿಯು ಕಾರನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಗಣೇಶ ದೂರಿನಲ್ಲಿ ತಿಳಿಸಿದ್ದಾರೆ.
Memorandum/ ಅನುದಾನಿತ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ
ದೂರಿನ ಆಧಾರದ ಮೇಲೆ ಮುರ್ಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದು(Case registered), ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Fined/ ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡಿದ ಇಬ್ಬರಿಗೆ ₹25 ಸಾವಿರ ದಂಡ

