ಭಟ್ಕಳ: ಗಾಂಜಾ ಸೇವನೆ ಮಾಡಿದ ಇಬ್ಬರ ವಿರುದ್ಧ ಎರಡು ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ನ್ಯಾಯಾಂಗ ಬಂಧನ (judicial custody) ವಿಧಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರ (Murdeshwar) ನಾಕಾ ಸಮೀಪದ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಮುರ್ಡೇಶ್ವರ (Murudeshwar) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಳ್ಳಾರಿ (Bellary) ಜಿಲ್ಲೆಯ ಕುರುಗೋಡು ತಾಲೂಕಿನ ಕುಡುತಿನಿ ನಿವಾಸಿ ಅನಿಲಕುಮಾರ ಕೆ ರುದ್ರಪ್ಪ (೨೫) ಎಂದು ಗುರುತಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ (medical test) ಬಳಿಕ ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಲಾಗಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

arrest/ ಭಟ್ಕಳ ಪೊಲೀಸರಿಂದ ಮಂಕಿ ಠಾಣೆಯ ಪಿಎಸೈ ಬಂಧನ ಯಾಕೆ ಗೊತ್ತಾ?

ಇನ್ನೊಂದು ಪ್ರಕರಣದಲ್ಲಿ, ತಾಲೂಕಿನ ಹೆಬಳೆ ಹನೀಫಾಬಾದ್‌ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಜಾಲಿ ಆಜಾದ್ ನಗರದ ಮಹಮ್ಮದ್ ಮೀರಾ (೨೮) ಅವರನ್ನು ತಾಲೂಕು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Memorandum/ ಅನುದಾನಿತ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ