ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯದ ಆರೋಗ್ಯ ಸಚಿವ (Health Minister) ಯು ಟಿ ಖಾದರ್ (U T Khadar) ಭಟ್ಕಳದಿಂದಲೇ ಹಾದು ಹೋಗಿದ್ದರೂ ರಾಷ್ಟ್ರೀಯ ಹೆದ್ದಾರಿ (National Highway) ಸಮೀಪವೇ ಇದ್ದ ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಗೆ (Government Hospital) ಭೇಟಿ ನೀಡದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲೆಯ ಮುಂಗಾರು (monsoon) ವಿಕೋಪ ನಿಯಂತ್ರಣದ ಉಸ್ತುವಾರಿಯೂ ಆಗಿರುವ ಸಚಿವ ಖಾದರ್ ಇದೇ ಮೊದಲ ಬಾರಿಗೆ ಶನಿವಾರದಂದು ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ  ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆಗಳ ಕುರಿತು ಅವರು ಅಧಿಕಾರಿಗಳೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಸಿದ್ದರು. ಕಾರವಾರಕ್ಕೆ (Karwar) ತೆರಳುವ ಮಾರ್ಗ ಮಧ್ಯ ಭಟ್ಕಳ- ಶಿರೂರು ಟೋಲ್ ಗೇಟ್ ಬಳಿ ಸಚಿವರನ್ನು ಭಟ್ಕಳ ತಂಜೀಂ ಸಂಸ್ಥೆ ಪದಾಧಿಕಾರಿಗಳು, ಕೆಲ ಕಾಂಗ್ರೆಸ್ ಮುಖಂಡರು ಹೂವಿನ ಹಾರ ಹಾಕಿ ಸ್ವಾಗತಿಸಿದ್ದರು. ಅಲ್ಲಿಂದ ಸಚಿವರು ಜಿಲ್ಲಾ ಕೇಂದ್ರ ಕಾರವಾರದ ಕಡೆಗೆ ಪ್ರಯಾಣ ಬೆಳೆಸಿದ್ದು, ಕುಮಟಾ ಶಾಸಕ ದಿನಕರ ಶೆಟ್ಟಿ ಒತ್ತಾಸೆ ಮೇರೆಗೆ ಕುಮಟಾ ಸರಕಾರಿ ಆಸ್ಪತ್ರೆಗೆ ಡಿಢೀರ ಭೇಟಿ ನೀಡಿ ಅರ್ಧ ಗಂಟೆಗೂ ಅಧಿಕ ಕಾಲ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದ್ದರು.

Press Day/ ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ: ಸಾಧಕ ಪೊಲೀಸರಿಗೆ ಸನ್ಮಾನ

ನಂತರ ಸಂಜೆ ಅಧಿಕಾರಿಗಳ ಸಭೆ ಮುಗಿಸಿ ಅಂಕೋಲಾ ಶಿರೂರು ಗುಡ್ಡ ಕುಸಿತದ ಸ್ಥಳ ಹಾಗೂ ಅಂಕೋಲಾದ ಪಿಎಚ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಉಡುಪಿಗೆ ಮರಳುವಾಗಲೂ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡದಿರುವುದು ಭಟ್ಕಳ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ (Health Minister) ಖಾದರ್  ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳ ಪರಿಶೀಲನೆ ಮಾಡಿ ಜನರ ಅಹವಾಲು ಸ್ವೀಕರಿಸಲಿದ್ದಾರೆಂಬ ನಿರೀಕ್ಷೆ ಇಲ್ಲಿನ ಜನರಲ್ಲಿತ್ತು. ಈ ಬಗ್ಗೆ ಜನರು ಸಹ ಸಿದ್ಧರಾಗಿದ್ದರು. ವಾಪಸ್ಸು ಉಡುಪಿ (Udupi)ಗೆ ತೆರಳುವ ಸಂದರ್ಭದಲ್ಲಿಯಾದರೂ ಭಟ್ಕಳಕ್ಕೆ ಭೇಟಿ ನೀಡುವ ನಿರೀಕ್ಷೆ ದಟ್ಟವಾಗಿತ್ತು. ಅಂಕೋಲಾ(Ankola) ದಲ್ಲಿ ಸಚಿವ ಬೆಂಗಾವಲು ಪಡೆ ಕಾರಿಗೆ ಅಪಘಾತದ ಕಾರಣ ಭೇಟಿಯನ್ನು ಮೊಟಕುಗೊಳಿಸಿ ಉಡುಪಿಗೆ ತೆರಳಿರಬಹುದು ಎಂಬ ಮಾತು ಸಹ ಕೇಳಿ ಬಂದಿದೆ.

Case registered/ ಕಾರಿಗೆ ಡಿಕ್ಕಿ ಹೊಡೆದ ಯುವಕನ ವಿರುದ್ಧ ಕೇಸು ದಾಖಲು

ಸದ್ಯ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅವಶ್ಯಕ ಕೆಲ ವಿಭಾಗದ ವೈದ್ಯರ ನೇಮಕಾತಿ, ಸಿಬ್ಬಂದಿ ನೇಮಕಾತಿ ಹಾಗೂ ಕೆಲ ವ್ಯವಸ್ಥೆಗಳು ತ್ವರಿತಗತಿಯಲ್ಲಿ ಆಗಬೇಕಾಗಿದ್ದು, ಸಚಿವರ ಆಗಮನದಿಂದ ಇವೆಲ್ಲ ಈಡೇರಲಿದೆ ಎಂಬ ಆಶಾಭಾವನೆಯಲ್ಲಿದ್ದ ಜನರಿಗೆ ನಿರೀಕ್ಷೆಗಳೆಲ್ಲ ಸುಳ್ಳಾದವು. ಸಚಿವ ಖಾದರ್ ಅವರಿಗೆ ಭಟ್ಕಳದ ಕಾಂಗ್ರೆಸ್ (Congress) ಪಕ್ಷದ ಮುಖಂಡರು ಸಚಿವರಲ್ಲಿ ಪಟ್ಟು ಹಿಡಿದಿದ್ದರೆ, ಸ್ಥಳೀಯ ಶಾಸಕ ಮಂಕಾಳ ವೈದ್ಯ ಆಸಕ್ತಿ ತೋರಿದ್ದರೆ ಭೇಟಿ ನೀಡುತ್ತಿದ್ದರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

judicial custody/ ಭಟ್ಕಳದಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ