ಭಟ್ಕಳ: ಭಾರತೀಯ ಸೇನೆಯ (Indian Army) ಪ್ರತಿಷ್ಠಿತ ೧೦ ಪ್ಯಾರಾ (Special Forces) ಘಟಕದಲ್ಲಿ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕಮಾಂಡೋ (Commando) ಹರೀಶ್ ಮಂಜುನಾಥ ನಾಯ್ಕ ಅವರು ತವರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮುರುಡೇಶ್ವರದಲ್ಲಿ (Murdeshwar) ಅದ್ದೂರಿ ಸ್ವಾಗತ ಕೋರಲಾಯಿತು. ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಮುರುಡೇಶ್ವರ (Murudeshwara) ನಾಕಾದಲ್ಲಿ ಸೇರಿ ಹೂಮಾಲೆ ಹಾಕಿ ಗೌರವಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ವಾಗತ ಸಮಾರಂಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ ಡಿ ಪಕ್ಕಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ಸುರೇಶ ನಾಯ್ಕ, ಮಂಜುನಾಥ ಹೆಗಡೆ, ವಿ ಆರ್ ಶೆಟ್ಟಿ, ಶಂಭು ಹೆಗಡೆ, ಎಸ್ ಎಸ್ ಕಾಮತ, ನಿವೃತ್ತ ಸೈನಿಕ ಹಾಗೂ ಜಿಎಸ್‌ಟಿ (GST) ಸಹಾಯಕ ಆಯುಕ್ತ ರಂಗನಾಥ ಎಂ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Health Minister/ ಬಾರದ ಆರೋಗ್ಯ ಸಚಿವ: ಭಟ್ಕಳ ಜನರ ನಿರೀಕ್ಷೆ ಹುಸಿ
ಹರೀಶ ನಾಯ್ಕ ಕಲಿತ ಜನತಾ ವಿದ್ಯಾಲಯದ ೨೦೦೫ನೇ ಬ್ಯಾಚಿನ ಗೆಳೆಯರ ಬಳಗ ಸಮಾರಂಭದ ಆಯೋಜನೆಯನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಮಾಜಿ ಸೈನಿಕ ಸಂಘದ ನಿವೃತ್ತ ಸೈನಿಕರು, ಲಯನ್ಸ್ ಕ್ಲಬ್ ಭಟ್ಕಳ, ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಜನತಾ ವಿದ್ಯಾಲಯ (janatha vidyalaya) ಮುರ್ಡೇಶ್ವರದ ಶಿಕ್ಷಕರು, ಜನತಾ ವಿದ್ಯಾಲಯ ಶಿರಾಲಿ, ಜನತಾ ವಿದ್ಯಾಲಯ ಪದವಿ ಪೂರ್ವ ಶಿರಾಲಿಯ ಶಿಕ್ಷಕರು, ಆಟೋ ಚಾಲಕ ಮಾಲೀಕರ ಸಂಘ ಮುಡೇಶ್ವರ, ಹೊರ ಜಿಲ್ಲೆಯ ನಿವೃತ್ತ ಸೈನಿಕ (Retired soldier), ಜಿಎಸ್‌ಟಿ ಸಹಾಯಕ ಆಯುಕ್ತ ರಂಗನಾಥ ಎಂ ಹಾಗೂ ಬಬಲೇಶ್ವರ, ಸಂಬು, ಮುರ್ಗಪ್ಪ, ಕುಟುಂಬದವರು, ಊರಿನವರು, ಸಾರ್ವಜನಿಕರು ಇದ್ದರು.
Press Day/ ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ: ಸಾಧಕ ಪೊಲೀಸರಿಗೆ ಸನ್ಮಾನ
ಮುರುಡೇಶ್ವರ ಸಮೀಪದ ಹಿರೇದೋಮಿ–ತೂದಳ್ಳಿ ಗ್ರಾಮದ ಮೂಲ ನಿವಾಸಿಯಾಗಿರುವ ಹರೀಶ ನಾಯ್ಕ ಅವರು ಮಂಜುನಾಥ ಶನಿಯರ ನಾಯ್ಕ ಹಾಗೂ ಯಮುನಾ ದಂಪತಿಯ ಪುತ್ರ. ಪ್ರಸ್ತುತ ಬೈಲೂರು ಗ್ರಾಮದ ಎಡಬಡ್ರುವಿನಲ್ಲಿ ವಾಸವಾಗಿದ್ದಾರೆ. ತೂದಳ್ಳಿ ಮತ್ತು ಕೆರೆಕಟ್ಟೆ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ, ಮುರುಡೇಶ್ವರದ ಜನತಾ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ, ಶಿರಾಲಿಯ ಜನತಾ ಪದವಿ ಪೂರ್ವ (pre-university) ಕಾಲೇಜಿನಲ್ಲಿ ಪಿಯುಸಿ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu VV) ಪದವಿ (degree) ಶಿಕ್ಷಣ ಪೂರ್ಣಗೊಳಿಸಿದ್ದಾರೆ.
Case registered/ ಕಾರಿಗೆ ಡಿಕ್ಕಿ ಹೊಡೆದ ಯುವಕನ ವಿರುದ್ಧ ಕೇಸು ದಾಖಲು
೨೦೦೯ರ ಮಾರ್ಚ್ ೨೩ರಂದು ಭಾರತೀಯ ಸೇನೆಗೆ ಸೇರ್ಪಡೆಯಾದ ಅವರು ಆರ್ಮಿ ಏರ್ ಡಿಫೆನ್ಸ್ (Army air defence) ಸೆಂಟರ್‌ನಲ್ಲಿ ಮೂಲಭೂತ ತರಬೇತಿ ಪಡೆದು, ಜೋಧಪುರದ (Jodhpur) ೧೫೨ ಏರ್ ಡಿಫೆನ್ಸ್ ರೆಜಿಮೆಂಟ್‌ನಲ್ಲಿ ಗನ್ನರ್ ಆಗಿ ಸೇವೆ ಆರಂಭಿಸಿದರು. ೧೧೦ ಮೀಟರ್ ಹರ್ಡಲ್ಸ್ ಅಥ್ಲೀಟ್ (athlete) ಆಗಿದ್ದ ಅವರು ಮೂರು ಬಾರಿ ಆರ್ಮಿ ಕಮಾಂಡ್ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸೇನೆಯನ್ನು ಪ್ರತಿನಿಧಿಸಿದ್ದರು.
judicial custody/ ಭಟ್ಕಳದಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ
೨೦೧೪–೧೫ರಲ್ಲಿ ಕಠಿಣ ಕಮಾಂಡೋ ತರಬೇತಿ, ಪ್ಯಾರಾ ಜಂಪ್ ಹಾಗೂ ಕಮಾಂಡೋ ಕೋರ್ಸ್ ಪೂರ್ಣಗೊಳಿಸಿ ಬಲಿದಾನ್ ಬ್ಯಾಡ್ಜ್ ಮತ್ತು ಮೆರೂನ್ ಕ್ಯಾಪ್ ಧರಿಸುವ ಅರ್ಹತೆ ಪಡೆದ ಅವರು ಬಳಿಕ ಭಾರತೀಯ ಸೇನೆಯ ವಿಶೇಷ ಕಾರ್ಯಾಚರಣೆಗಳಿಗೆ ಹೆಸರುವಾಸಿಯಾದ ೧೦ ಪ್ಯಾರಾ (Special Forces) ಘಟಕಕ್ಕೆ ಆಯ್ಕೆಯಾದರು. ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಗ್ರವಿರೋಧಿ ಕಾರ್ಯಾಚರಣೆಗಳು ಹಾಗೂ ರಾಷ್ಟ್ರೀಯ ಭದ್ರತೆಗೆ (national security) ಸಂಬಂಧಿಸಿದ ವಿಶೇಷ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದು, ಅಮೆರಿಕ ಹಾಗೂ ಅಫಘಾನಿಸ್ತಾನದ (Afghanistan) ಸೇನೆಗಳೊಂದಿಗೆ ನಡೆದ ಜಂಟಿ ಸೇನಾ ಅಭ್ಯಾಸಗಳಲ್ಲಿಯೂ ಭಾಗವಹಿಸಿದ್ದರು.
arrest/ ಭಟ್ಕಳ ಪೊಲೀಸರಿಂದ ಮಂಕಿ ಠಾಣೆಯ ಪಿಎಸೈ ಬಂಧನ ಯಾಕೆ ಗೊತ್ತಾ?
ಅವರ ಸಹೋದರ ನಂದೀಶ ಮಂಜುನಾಥ ನಾಯ್ಕ ಕೂಡ ಭಾರತೀಯ ಸೇನೆಯ ೨ ಪ್ಯಾರಾ (Special Forces) ಘಟಕದಲ್ಲಿ ಕಮಾಂಡೋ (commando) ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಏಳು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ (Jammu Kashmir) ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Memorandum/ ಅನುದಾನಿತ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ

