ಭಟ್ಕಳ: ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿಮಕ್ಕಿ–ಎಡಬಡ್ರು ರಸ್ತೆ ಬದಿಯಲ್ಲಿ ಪದೇಪದೆ ಅವೈಜ್ಞಾನಿಕವಾಗಿ ಕಸ ವಿಲೇವಾರಿ (waste disposal) ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ರಾತ್ರಿ ಕಸ ಸುರಿಯಲು ಬಂದಿದ್ದ ವಾಹನವನ್ನು ಗ್ರಾಮಸ್ಥರು ವಶಕ್ಕೆ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿರುವ ಕಸದಿಂದ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಸವನ್ನು ಜಾನುವಾರುಗಳು ತಿನ್ನುತ್ತಿರುವುದರಿಂದ ಅವುಗಳ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ಗ್ರಾಮಸ್ಥರು ಹಲವು ಬಾರಿ ಸ್ವಯಂಪ್ರೇರಿತವಾಗಿ ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡಿದರೂ, ರಾತ್ರಿ ವೇಳೆ ವಾಹನಗಳಲ್ಲಿ ಬಂದು ಕಸ ಸುರಿಯುವ ಕೃತ್ಯ ಮಾತ್ರ ಮುಂದುವರಿದಿದೆ.
Road accident/ ಭಟ್ಕಳದ ಯುವಕನ ಜೀವ ತೆಗೆದ ತ್ರಾಸಿ ಬೀಚ್ ಬಳಿಯ ರಸ್ತೆ ಅಪಘಾತ
ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಅಧಿಕಾರಿಗಳ ಎಚ್ಚರಿಕೆ ಹಾಗೂ ಗ್ರಾಮ ಪಂಚಾಯಿತಿಯ “ಇಲ್ಲಿ ಕಸ ಹಾಕಬೇಡಿ” ಎಂಬ ಸೂಚನಾ ಫಲಕವೂ ಫಲಕಾರಿಯಾಗಿಲ್ಲ. ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳ ಕೊರತೆಯೇ ದುಷ್ಕರ್ಮಿಗಳಿಗೆ ಅನುಕೂಲವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಎರಡು–ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಜನಸ್ಪಂದನಾ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Commando/ ೧೭ ವರ್ಷ ದೇಶಸೇವೆ ಬಳಿಕ ತವರಿಗೆ ಕಮಾಂಡೋ ವಾಪಸ್: ಯಾರಿವರು ಗೊತ್ತಾ?
ಬಸ್ತಿಮಕ್ಕಿ–ಎಡಬಡ್ರು ರಸ್ತೆಯಲ್ಲಿ ತಕ್ಷಣ ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳನ್ನು ಅಳವಡಿಸಬೇಕು. ಜೊತೆಗೆ ಸಿಸಿಟಿವಿ, ರಾತ್ರಿ ಗಸ್ತು ಸೇರಿದಂತೆ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಜಾರಿಗೊಳಿಸಿ ಅಕ್ರಮ ಕಸ ವಿಲೇವಾರಿ (waste disposal) ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Health Minister/ ಬಾರದ ಆರೋಗ್ಯ ಸಚಿವ: ಭಟ್ಕಳ ಜನರ ನಿರೀಕ್ಷೆ ಹುಸಿ
ವಿಶ್ವವಿಖ್ಯಾತ ಪ್ರವಾಸಿ ತಾಣ ಮುರುಡೇಶ್ವರದ (Murudeshwara) ಸಮೀಪವೇ ಈ ರೀತಿಯ ಅಕ್ರಮ ಕಸ ವಿಲೇವಾರಿ ನಡೆಯುತ್ತಿರುವುದು ಪರಿಸರ ಹಾಗೂ ಪ್ರವಾಸೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Press Day/ ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ: ಸಾಧಕ ಪೊಲೀಸರಿಗೆ ಸನ್ಮಾನ

