ಭಟ್ಕಳ: ಮುರುಡೇಶ್ವರ (Murudeshwara) ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ (RNSPU College) ಪ್ರಥಮ ಪಿಯುಸಿ (first PUC) ವಿದ್ಯಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುಖ್ಯ ಅತಿಥಿಯಾಗಿ ಆಗಮಿಸಿದ ಬಣಸಾಲೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸದಾಶಿವ ಎಂ ಹೆಗಡೆ, ನಗರ ಪ್ರದೇಶಗಳಲ್ಲಿ ಸಿಗುವಂತಹ ವೃತ್ತಿಪರ ಕೋರ್ಸ್ಗಳ ತರಬೇತಿಗಳು ಸ್ಥಳೀಯವಾಗಿ ಸಿಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ
ವಿದ್ಯಾರ್ಥಿ ಪ್ರತಿನಿಧಿಗಳ ಮುಖ್ಯಸ್ಥರಾಗಿ ಗಗನ್ ನಾಯ್ಕ, ಪ್ರತಿಕ್ಷಾ ಭಟ್, ಉಪ ಮುಖ್ಯಸ್ಥರಾಗಿ ಕೌಶಿಕ ರಾಥೋಡ, ಪ್ರಿಯಾಂಕಾ ನಾಯ್ಕ, ಸಾಂಸ್ಕೃತಿಕ ನಾಯಕರಾಗಿ ಮದನ ನಾಯ್ಕ, ತನುಶ್ರೀ ನಾಯ್ಕ, ಕ್ರೀಡಾ ನಾಯಕರಾಗಿ ಹೇಮಂತ ನಾಯ್ಕ ಹಾಗೂ ಕವನಾ ಭಟ್ ಆಯ್ಕೆಯಾಗಿದ್ದು ಇವರಿಗೆ ಪದಗ್ರಹಣ ಮಾಡಲಾಯಿತು.
Farming lessons/ ಗದ್ದೆಯಲ್ಲೇ ಕೃಷಿ ಪಾಠ
ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ (RNSPU College) ಪ್ರಾಂಶುಪಾಲೆ ಅಶ್ವಿನಿ ಶೇಟ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಸಂಯೋಜಕ ಕೃಷ್ಣಪ್ರಸಾದ್ ಪಿ ಹಾಗೂ ಸಾಂಸ್ಕೃತಿಕ ಸಂಚಾಲಕಿ ವೀಣಾ ಖಾರ್ವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
Commando/ ೧೭ ವರ್ಷ ದೇಶಸೇವೆ ಬಳಿಕ ತವರಿಗೆ ಕಮಾಂಡೋ ವಾಪಸ್: ಯಾರಿವರು ಗೊತ್ತಾ?
ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ದೀಕ್ಷಾ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀದೇವಿ ನಾಯ್ಕ ವಂದಿಸಿದರು. ಪ್ರಜ್ಞಾ ನಾಯ್ಕ, ಪ್ರಿಯಾಂಕ ನಾಯ್ಕ ನಿರೂಪಿಸಿದರು.
Press Day/ ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ: ಸಾಧಕ ಪೊಲೀಸರಿಗೆ ಸನ್ಮಾನ


