ಭಟ್ಕಳ: ವಿದ್ಯಾರ್ಥಿಗಳಿಗೆ ವಾಣಿಜ್ಯ (commerce) ಕ್ಷೇತ್ರದಲ್ಲಿ ಉನ್ನತ ವೃತ್ತಿಪರ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಹೆಜ್ಜೆಯಾಗಿ ಭಟ್ಕಳದ (Bhatkal) ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನಲ್ಲಿ ಉಡುಪಿ(Udupi)ಯ ವೀರೀಚ್ ಅಕಾಡೆಮಿ ಸಹಯೋಗದಲ್ಲಿ ಸಿಎ ಫೌಂಡೇಶನ್ (CA Foundation) ಮತ್ತು ಸಿಎಸ್ ಪ್ರವೇಶ ಪರೀಕ್ಷೆ (CS Entrance Exam ) ತರಬೇತಿ (Coaching) ಕಾರ್ಯಕ್ರಮ ಉದ್ಘಾಟಿಸಲಾಯಿತು (Inauguration).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಎಜ್ಯುಕೇಷನ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡುತ್ತ, ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿಯೇ ವೃತ್ತಿಪರ ಶಿಕ್ಷಣದತ್ತ ಹೆಜ್ಜೆಯಿಡುವಂತೆ ಮಾರ್ಗದರ್ಶನ ನೀಡುವ ಉದೇಶದಿಂದ ಈ ವಿಶೇಷ ತರಬೇತಿ (Coaching) ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಹೇಳಿದರು.

Farming lessons/ ಗದ್ದೆಯಲ್ಲೇ ಕೃಷಿ ಪಾಠ

ಮುಖ್ಯ ಅತಿಥಿ ಭಟ್ಕಳ ಎಜ್ಯುಕೇಷನ ಟ್ರಸ್ಟಿನ ಟ್ರಸ್ಟಿ ಶ್ರೀಧರ ಶಾನಭಾಗ ಮಾತನಾಡುತ್ತ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿಎ ಹಾಗೂ ಸಿಎಸ್ ಮುಂತಾದ ಪ್ರತಿಷ್ಠಿತ ವೃತ್ತಿಪರ ಕೋರ್ಸಗಳು ವಿದ್ಯಾರ್ಥಿಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಉದ್ಯೋಗ ಮತ್ತು ನಾಯಕತ್ವದ ಅವಕಾಶಗಳನ್ನು ಒದಗಿಸುತ್ತವೆ ಎಂದು ತಿಳಿಸಿದರು.

Commando/ ೧೭ ವರ್ಷ ದೇಶಸೇವೆ ಬಳಿಕ ತವರಿಗೆ ಕಮಾಂಡೋ ವಾಪಸ್: ಯಾರಿವರು ಗೊತ್ತಾ?

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೀರೀಚ ಅಕೆಡೆಮಿಯ ಸಂಸ್ಥಾಪಕ ಸಿ ಎಸ್ ಸಂತೋಷ ಪ್ರಭು, ಭಟ್ಕಳದ ವಿದ್ಯಾರ್ಥಿಗಳು ಉಡುಪಿಗೆ ಬಂದು ಹಾಸ್ಟೆಲ್ ಅಥವಾ ರೂಮು ಮಾಡಿಕೊಂಡು ಸಿಎ ಫೌಂಡೇಶನ್ ಮತ್ತು ಸಿಎಸ್ ಪ್ರವೇಶ ಪರಿಕ್ಷೆ ತರಬೇತಿ ಪಡೆಯಲು ಪಡುವ ಕಷ್ಟವನ್ನು ತಪ್ಪಿಸಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಉಪಯೋಗವನ್ನು ಪಡೆಯಬೇಕು ಎಂದು ಹೇಳಿದರು.

Press Day/ ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ: ಸಾಧಕ ಪೊಲೀಸರಿಗೆ ಸನ್ಮಾನ

ಪ್ರಾಂಶುಪಾಲ ಡಾ ವಿರೇಂದ್ರ ವಿ ಶಾನಭಾಗ ಸ್ವಾಗತಿಸಿದರು, ಉಪನ್ಯಾಸಕಿ ಸಂಕಲ್ಪ ನಿರೂಪಿಸಿದರು, ವಿದ್ಯಾರ್ಥಿನಿ ವಿಹಾ ವಿ ಶಾನಭಾಗ ಮತ್ತು ಸಂಗಡಿಗರು ಪ್ರಾರ್ಥಿಸಿದರು.

Memorandum/ ಅನುದಾನಿತ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ