ಭಟ್ಕಳ: ವಾಹನ ಸಾಲ ವಸೂಲಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ (Zero FIR) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೂರುದಾರರಾದ ವೆಂಕಟಾಪುರ ನಿವಾಸಿ ಮಣಿಕಂಠ ಭಟ್ಕಳದ (Bhatkal) ಶ್ರೀರಾಮ್ ಫೈನಾನ್ಸ್‌ನಿಂದ ₹೮.೧೦ ಲಕ್ಷ ವಾಹನ ಸಾಲ ಪಡೆದಿದ್ದರು. ಈ ಸಾಲಿನ ಮಾಹಿತಿಯನ್ನು ಪಡೆದುಕೊಂಡ ಆರೋಪಿಗಳಾದ ಬೆಂಗಳೂರಿನ (Bengaluru) ರಾಜ್ ರಿಕವರಿ ಏಜೆನ್ಸಿಯ ಜೀವನ ನಾಯ್ಕ, ಪ್ರದೀಪ ಹಾಗೂ ಸೀನು ಅವರು ಬೆಂಗಳೂರಿನ ಹೆಬ್ಬಾಳದ ಬಿಇಎಲ್ ವೃತ್ತದ ಬಳಿ ದೂರುದಾರರ ಕಾರನ್ನು ಅಡ್ಡಗಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Case registered/ ಪತಿ ಸೇರಿದಂತೆ ಕುಟುಂಬದ ಐವರ ವಿರುದ್ಧ ಕೇಸು ದಾಖಲಿಸಿದ ಮಹಿಳೆ
ಬಳಿಕ ದೂರುದಾರರನ್ನು ಕಾರಿನಿಂದ ಕೆಳಗಿಳಿಸಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ₹೬೦ ಸಾವಿರ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ದೂರುದಾರರ ಬಳಿ ಇದ್ದ ₹೩೦ ಸಾವಿರ ಪೈಕಿ ₹೨೦ ಸಾವಿರವನ್ನು ಸಮೀಪದ ಎಟಿಎಂನಿಂದ ತೆಗೆಯಿಸಿ ಪಡೆದುಕೊಂಡಿದ್ದು, ಉಳಿದ ₹೧೦ ಸಾವಿರವನ್ನು ಲೋಕೇಶ ಕುಮಾರ ಎಂಬುವರ ಕ್ಯೂಆರ್ ಕೋಡ್‌ಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
RNSPU College/ ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ
ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸರು ಜೀರೋ ಎಫ್‌ಐಆರ್ (Zero FIR) ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.
Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ
ಏನಿದು ಜೀರೋ ಎಫ್‌ಐಆರ್?
ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಜೀರೊ ಎಫ್‌ಐಆರ್ ಅವಕಾಶ ನೀಡುತ್ತದೆ. ಜೀರೊ ಎಫ್‌ಐಆರ್‌ನಲ್ಲಿ ಯಾವುದೇ ನಿರ್ದಿಷ್ಟ ಸಂಖ್ಯೆ ಇರುವುದಿಲ್ಲ, ಆದ್ದರಿಂದ ಇದನ್ನು ‘ಶೂನ್ಯ’ (0) ಎಂದು ಗುರುತಿಸಲಾಗುತ್ತದೆ. ದೂರು ದಾಖಲಿಸಿಕೊಂಡ ನಂತರ, ಪೊಲೀಸರು ಅದನ್ನು ಸಂಬಂಧಪಟ್ಟ ಠಾಣೆಗೆ ವರ್ಗಾಯಿಸುತ್ತಾರೆ.


