ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ ೧೪ರ ಅಜಾದನಗರ ೭ನೇ ಕ್ರಾಸ್ ಹನಿಫಾ ಸ್ಟ್ರೀಟ್ ನಿವಾಸಿಗಳು ಮೂಲಭೂತ ಸೌಕರ್ಯವಿಲ್ಲದೆ ನಾನಾ ಸಮಸ್ಯೆಗಳಿಂದ (Various problems) ಪರದಾಡುವಂತಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
೭ನೇ ಕ್ರಾಸ್ ನಲ್ಲಿ ಕೇವಲ ಐವತ್ತು ಮೀಟರ್ ಉದ್ದದ ಕಾಂಕ್ರೀಟ್ ಇದ್ದು, ಮುಂದಿನ ಭಾಗದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕೂಡ ಸಂಚರಿಸಲು ಆಗದೆ ಸಣ್ಣಸಣ್ಣ ಮಕ್ಕಳನ್ನು ತುಂಬಾ ದೂರದವರಿಗೆ ನಡೆಸಿಕೊಂಡು ಶಾಲಾ ವಾಹನವನ್ನು ಹತ್ತಿಸಬೇಕಾಗಿದೆ. ಈ ರಸ್ತೆಯು ಮಣ್ಣಿನಿಂದ ಕೂಡಿದ್ದು ಹಾಗೂ ದೊಡ್ಡ ದೊಡ್ಡ ಹೊಂಡಗಳು ಬಿದ್ದಿರುವುದರಿಂದ ವಾಹನ ಸವಾರರು ಅನೇಕ ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ.
Zero FIR/ ಮೂವರ ವಿರುದ್ಧ ಜೀರೋ ಎಫ್ಐಆರ್: ಏನಿದು ಪ್ರಕರಣ?
೭ನೇ ಕ್ರಾಸಿಲ್ಲಿ ಪಟ್ಟಣ ಪಂಚಾಯತಿಯ ಕುಡಿಯುವ ನೀರು ಸರಬರಾಜು ಮಾಡು ನೀರಿನ ಪೈಪು ಲೈನ ಸಹ ಇಲ್ಲ. ಕಾರಣ ದ್ವಿಚಕ್ರ ವಾಹನಗಳು ಓಡಾಡುವ ಸಮಯದಲ್ಲಿ ಪೈಪು ಒಡೆದು ಹೋಗಿ ನೀರು ಸೋರಿಕೆ ಆಗುತ್ತಿದೆ. ಮಳೆಗಾಲದ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಚರಂಡಿ ನೀರು ನಿವಾಸಿಗಳ ಮನೆಯಂಗಳಕ್ಕೆ ಬರುತ್ತಿದೆ. ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
Case registered/ ಪತಿ ಸೇರಿದಂತೆ ಕುಟುಂಬದ ಐವರ ವಿರುದ್ಧ ಕೇಸು ದಾಖಲಿಸಿದ ಮಹಿಳೆ
ಆಜಾದನಗರ ೭ನೇ ಕ್ರಾಸಿಗೆ ತಿರುಗುವ ಅಡ್ಡರಸ್ತೆಯ ಚರಂಡಿಯ ಮೇಲ್ಭಾಗದಲ್ಲಿ ಸರಿಯಾದ ಮುಚ್ಚಳಿಕೆ ಇಲ್ಲದೆ ರಾತ್ರಿ ಸಮಯದಲ್ಲಿ ಮಕ್ಕಳು ಮತ್ತು ಹಿರಿಯರು ನಡೆದುಕೊಂಡು ಹೋಗುವಾಗ ಚರಂಡಿಗೆ ಬೀಳುವ ಸಂಭವವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ (Various problems) ಶಾಶ್ವತ ಪರಿಹಾರ ಒದಗಿಸಬೇಕು. ಈ ಸಮಸ್ಯೆಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
RNSPU College/ ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ
ವರ್ಷಗಳಿಂದ ಇರುವ ಈ ಸಮಸ್ಯೆಗೆ ಪರಿಹಾರ ಕೋರಿ ಅನೇಕ ಬಾರಿ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಲ್ಲಿನ ಮುಖ್ಯ ಅಧಿಕಾರಿ ಸ್ಪಂದಿಸುತ್ತಿಲ್ಲ. ಆರೋಗ್ಯ ನಿರೀಕ್ಷಕರು ಕೂಡ ಗಮನಹರಿಸುತ್ತಿಲ್ಲ. ಸಮರ್ಪಕ ರಸ್ತೆ ಇಲ್ಲ ಎಂದು ಎರಡು ವರ್ಷದ ಹಿಂದೆ ಅರ್ಜಿ ಸಲ್ಲಿಸಿದರೂ ಕಾಮಗಾರಿ ನಡೆಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ


