ಭಟ್ಕಳ: ದೇಶದಲ್ಲಿ ೧೯.೭೫ ಮಿಲಿಯನ್ ಟನ್ ಮೀನು ಉತ್ಪಾದನೆ (Fish production) ಮಾಡುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದ್ದೇವೆ. ಜೊತೆಗೆ ೭೫ ರಾಷ್ಟ್ರಗಳಿಗೆ (Countries) ಮೀನುಗಳನ್ನು ರಫ್ತು (export) ಮಾಡುತ್ತಿದ್ದೇವೆ ಎಂದು ಡಾ ಸೋಮಶೇಖರ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳೂರಿನ (Mangaluru) ಅರಬ್ಬಿ ಸಮುದ್ರ (arabian sea) ಮೀನುಗಾರಿಕೆ ನಿರ್ವಹಣಾ ಸಮನ್ವಯ ಸಮಿತಿ ಮತ್ತು ಮೀನುಗಾರಿಕೆ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಪಿಐಎಫ್ ಮತ್ತು ಗೊರಟೆಯ ಮಹಾಸತಿ ಸಂಘ ಆಶ್ರಯದಲ್ಲಿ ಮಂಗಳವಾರ ಭಟ್ಕಳ (Bhatkal) ತಾಲೂಕಿನ ಗೊರಟೆಯ ಕಿರುಹೊಳೆ ಮಹಾಸತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟೀಯ ಮೀನು ಕೃಷಿಕರ ದಿನಾಚರಣೆ (Fish Farmers’ Day) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ ಅಧ್ಯಾಪಕರಾದ ಡಾ ಹೀರಾಲಾಲ್ ಚೌಧುರಿ ಮತ್ತು ಡಾ ಕೆ ಎಚ್ ಆಲಿಕುನ್ನಿ ಎಂಬಿಬ್ಬರು ವಿಜ್ಞಾನಿಗಳು ಐವತ್ತರ ದಶಕದ ಅಂತ್ಯದಲ್ಲಿ ಮೀನಿನ ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಿದ ಹಾರ್ಮೋನನ್ನು ಬಳಸಿ ಕೃತಕ ವಿಧಾನದಿಂದ ಗೆಂಡೆ ಮೀನುಗಳನ್ನು ವಂಶಾಭಿವೃದ್ಧಿ ಮಾಡಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಭಾರತೀಯ ಮೀನುಗಾರಿಕಾ (fishing) ರಂಗದಲ್ಲಿ ಈ ಹೊಸಕ್ರಾಂತಿಗೆ ನಾಂದಿ ಹಾಡಿದ ಮಹಾನ್ ವಿಜ್ಞಾನಿಗಳನ್ನು (scientists) ನೆನಪಿಸುವುದಾಗಿದೆ. ಹೀಗಾಗಿ ಭಾರತ ಸರ್ಕಾರದ ಆದೇಶಾನ್ವಯ ಪ್ರತಿ ವರ್ಷ ಜುಲೈ ೧೦ರಂದು ದೇಶಾದಾದ್ಯಂತ ‘ರಾಷ್ಟ್ರೀಯ ಮೀನು ಕೃಷಿಕರ ದಿನ’ವನ್ನು (Fish Farmers’ Day) ಆಚರಿಸಲಾಗುತ್ತದೆ ಎಂದರು.
course in London/ ಲಂಡನ್ನಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಪೂರ್ಣಗೊಳಿಸಿದ ಭಟ್ಕಳದ ಪ್ರಜ್ವಲ ನಾಯ್ಕ
ಚರ್ಮ ರೋಗ ತಜ್ಞೆ (Dermatologist) ಮಿಷೆಲ್ ಫೆರ್ನಾಂಡಿಸ್ ಮಾತನಾಡಿ, ಸಮುದ್ರದ ನೀರು ಹಾಗೂ ಬಿಸಿಲಿನಲ್ಲಿ ಮೀನು ಕೃಷಿ ಮಾಡುವ ರೈತರಿಗೆ ಚರ್ಮಕ್ಕೆ ಸಂಬಂಧಿತ ಕಾಯಿಲೆ ಬರುವ ಸಂಭವ ಇರುತ್ತದೆ. ತೇವಾಂಶ ಇರುವ ಸಂದರ್ಭದಲ್ಲಿ ಕೆಲವರಿಗೆ ಫಂಗಲ್ ಇನ್ಫೆಕ್ಷನ್ (fungal infection) ಹಾಗೂ ಕೆಲವು ತಳಿಯ ಮೀನುಗಳನ್ನು ಮುಟ್ಟುವುದರಿಂದ ಅಲರ್ಜಿಯಂತಹ ಕಾಯಿಲೆ ಮರುಕಳಿಸಬಹುದು. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಚರ್ಮರೋಗ ತಜ್ಞರ ಬಳಿ ತೆರಳಿ ಸೂಕ್ತ ಔಷದೊಪಚಾರ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ದಲ್ಲಿ ಚರ್ಮ ಕ್ಯಾನ್ಸರನಂತಹ (Skin cancer) ಕಾಯಿಲೆಯಾಗಿ ಭಾದಿಸಬಹುದು ಎಂದರು.
Distribution/ ಬೈಲೂರು ಕ್ಲಸ್ಟರ್ನ ೧೫ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ
ಮಹಾಸತಿ ಸಂಘದಿಂದ ಮೀನುಗಾರರಿಗೆ ಲೈಫ್ ಜಾಕೆಟ್ (life jacket) ವಿತರಿಸಲಾಯಿತು. ಮತ್ಸೋದ್ಯಮಿಗಳಿಗೆ ಸನ್ಮಾನಿಸಲಾಯಿತು. ಜಟ್ಗಾ ಮೊಗೇರ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಿವಕುಮಾರ ಮಗದ ನಿರೂಪಿಸಿದರು.
Punctuality/ ಚಲಿಸುವ ರೈಲಿನಿಂದ ಬಿದ್ದ ಯುವಕನ ಪ್ರಾಣ ಉಳಿಸಿದ ಸಿಬ್ಬಂದಿ
ಈ ಸಂದರ್ಭದಲ್ಲಿ ರಮೇಶ್ ಎಂ ಆರ್, ಭಟ್ಕಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ, ಅಳ್ವೆಗದ್ದೆಯ ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಗಣಪತಿ ಮೊಗೇರ, ಬೆಳ್ಕೆಯ ಮತ್ಸೋದ್ಯಮಿ ನಾಗಪ್ಪ ಮೊಗೇರ, ಶ್ರೀಧರ ಮೊಗೇರ, ಈಶ್ವರ ಮೊಗೇರ ಲಾಲುಮನೆ, ಅಳ್ವೆಗದ್ದೆಯ ನಾಡದೋಣಿ ಸಂಘ ಸಂಘದ ಸದಸ್ಯರು ಉಪಸ್ಥಿತರಿದ್ದರು. ಫಾದರ್ ಮುಲ್ಲರ್ (Father Muller) ಆಸ್ಪತ್ರೆಯ ನುರಿತ ವೈದ್ಯರು ಹಲ್ಲು, ಕೀಲು ಹಾಗೂ ಚರ್ಮಕ್ಕೆ ಸಂಬಂಧಿತ ರೋಗಕ್ಕೆ ಸಮಾಲೋಚನೆ ನಡೆಸಿ ಉಚಿತವಾಗಿ ಔಷಧಿ (Medicine) ನೀಡಿದರು.
Government Hospital road/ ಸರ್ಕಾರಿ ಆಸ್ಪತ್ರೆ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ಮಧ್ಯೆ ಗಿಡ ನೆಟ್ಟು ಪ್ರತಿಭಟನೆ


