ಭಟ್ಕಳ: ಜೆಎಂಎಫ್‌ ನ್ಯಾಯಾಲಯದಲ್ಲಿ (JMFC) ವಾರೆಂಟ್‌ನಲ್ಲಿದ್ದ ವ್ಯಕ್ತಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಜಾಮೀನು ಪಡೆಯಲು ಯತ್ನಿಸಿ, ಬಳಿಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಶಹರ ಪೊಲೀಸ್ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನ (Mangaluru) ಮುರೋಳಿ ನಿವಾಸಿ ಮಹೇಶ ಬಿ ಮೋಹನ ನಾಯಕ ಬಂಧಿತ ಆರೋಪಿ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೨೦೨೫ರ ಮೇ ೨೮ರಂದು ಭಟ್ಕಳದ (Bhatkal) ಬಿಳಾಲಖಂಡ ಗ್ರಾಮದ ಸಾಗರ ರಸ್ತೆ (Sagar Road) ಐದು ಜನ ದರೋಡೆಗೆ ಸಂಚು ರೂಪಿಸಿದ್ದರು. ಇನೋವಾ ಕಾರಿನಲ್ಲಿದ್ದ ಆ ಐವರು ಆ ಮಾರ್ಗದಲ್ಲಿ ಸಾಗುವ ಜನರಿಗೆ ಖಾರದಪುಡಿ ಎರಚಿ ದರೋಡೆ ಮಾಡುವ ಪ್ರಯತ್ನ ಮಾಡಿದ್ದರು. ದಕ್ಷಿಣ ಕನ್ನಡದ ಜಲೀಲ್ ಮಯುದ್ದೀನ್, ಹೆಬಳೆ ಗಾಂಧೀನಗರದ ನಾಸೀರ್ ಅಹ್ಮದ್ ಖಾದರ್, ಪುರವರ್ಗ ಗಣೇಶ ನಗರದ ರಿಹಾನ್ ಶೇಖ್, ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್ ಹಾಗೂ ನಬೀಲ್ ಎಂಬ ಡಕಾಯಿತರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಾಮೀನು ಒದಗಿಸಲು ಜೂ ೩೦ರಂದು ನ್ಯಾಯಾಲಯಕ್ಕೆ ಬಂದಿದ್ದರು. ನ್ಯಾಯಾಲಯದ ಶ್ಯೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ ಇವರ ಆಧಾರ್ ಕಾರ್ಡ್ ಹಾಗೂ ಪಹಣಿ ದಾಖಲೆಗಳನ್ನು ಪರಿಶೀಲಿಸುವಾಗ ಅನುಮಾನ ವ್ಯಕ್ತವಾಗಿದ್ದು, ಪರಿಶೀಲನೆ ನಡೆಯುತ್ತಿದ್ದಂತೆಯೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರು.

football tournament/ ಎಐಟಿಎಂನಲ್ಲಿ ವಿಟಿಯು ಅಂತರ-ಕಾಲೇಜು ಮಂಗಳೂರು ವಿಭಾಗ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿ, ಇದೀಗ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಇದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ. ಶಹರ ಠಾಣೆಯ ಸಿಪಿಐ ದಿವಾಕರ ಮಾರ್ಗದರ್ಶನದಲ್ಲಿ, ಪಿಎಸೈ ನವೀನ ನಾಯ್ಕ ಮತ್ತು ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

National award/ ವಿದ್ಯಾಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಅತ್ಯುತ್ತಮ ಅರ್ಹತಾ ಅಧ್ಯಾಪಕ ರಾಷ್ಟ್ರೀಯ ಪ್ರಶಸ್ತಿ