ಭಟ್ಕಳ: ಮಾದಕ ದ್ರವ್ಯ ಸೇವನೆ ಮಾಡಿದ ಪ್ರತ್ಯೇಕ ಪ್ರಕರಣಗಳಲ್ಲಿ (NDPS act) ಭಟ್ಕಳ (Bhatkal) ತಾಲೂಕಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ (arrest). ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ (police station) ನಾಲ್ವರು ಮತ್ತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಬ್ಬ ಬಂಧನಕ್ಕೆ ಒಳಗಾಗಿದ್ದಾರೆ

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಭಟ್ಕಳದ ತಗ್ಗರಗೋಡ ನಿವಾಸಿ ಮೊಹಮ್ಮದ್ ಸಲೀಂ ತಂದೆ ರಿಯಾಜ ಅಹ್ಮದ ಅತ್ತಾರ (೨೫) ಎಂಬಾತನನ್ನು ಬಂಧಿಸಿದ್ದಾರೆ. ಈತ ಜು ೧೬ರಂದು ೧೧-೪೫ ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಫಿರ್ದೋಸನಗರ ಕೋಳಿ ಫಾರ್ಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು 

ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ  ನವೀನ ಎಸ್ ನಾಯ್ಕ ಮಾದಕ ದ್ರವ್ಯ ಸೇವನೆ ಆರೋಪದಡಿ (NDPS act) ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ತಕಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಅನಾಸ್ ತಂದೆ ಅಲಿ ಅಕ್ಬರ ಭಾವಲಾ (೧೮) ಎಂಬಾತನನ್ನು ಭಟ್ಕಳ ಶಹರದ ಸಂತೆ ಮಾರ್ಕೆಟ್ ಹತ್ತಿರ ವಶಕ್ಕೆ ಪಡೆದಿದ್ದರೆ, ಖಾಜಿಯಾ ಸ್ಟ್ರೀಟ್ ಮುಸ್ಬಾ ಹೌಸ್ ನಿವಾಸಿ ಅಬ್ದುಲ್ ಆಲಿಂ ತಂದೆ ಮೊಹ್ಮದ್ ಇಕ್ಬಾಲ್ ಶೇಖ (೪೨) ಎಂಬಾತ ಭಟ್ಕಳ ಶಹರದ ಮುಗ್ದುಂ ಕಾಲೋನಿ ಪಳ್ಳಿ ಹತ್ತಿರ ಸಿಕ್ಕಿಬಿದ್ದಿದ್ದಾನೆ.

Murinakatte/ ಮುರಿನಕಟ್ಟೆ ಪ್ರಕರಣದ ಆರೋಪಿಗೆ ಹೈಕೋರ್ಟ್‌ನಿಂದ ಜಾಮೀನು 

ಬೆಳ್ನಿ ಬಂದರ ರಸ್ತೆ ನಿವಾಸಿ ಮೊಹಮ್ಮದ್ ಅವ್ವಾಬ್ ತಂದೆ ಮೊಹಮ್ಮದ್ ಅಯ್ಯೂಬ್ (೨೦) ಭಟ್ಕಳ ಶಹರದ ಬಂದರ ರೋಡ ಹತ್ತಿರ ಮತ್ತು ಕುಂದಾಪುರ (Kundapura) ತಾಲೂಕಿನ ಶಿರೂರು ಕರಿಕಟ್ಟೆ ವಾಸಿ ಮಹಮ್ಮದ್ ಅಶ್ರಫ್ ತಂದೆ ಖಾಜಾ ಮೊಹಿದ್ದೀನ್ (೧೮) ಭಟ್ಕಳ ಶಹರದ ಸಾಗರ ರೋಡ ಹತ್ತಿರ ಬಂಧನಕ್ಕೆ ಒಳಗಾಗಿದ್ದಾರೆ.

Rainfall deficit/ ಭಟ್ಕಳದಲ್ಲಿ ಆತಂಕ ಮೂಡಿಸಿದ ಮಳೆ ಕೊರತೆ: ಕೃಷಿ, ಕುಡಿಯುವ ನೀರು ಹಾಗೂ ಪರಿಸರದ ಮೇಲೆ ಪರಿಣಾಮದ ಆತಂಕ