ಭಟ್ಕಳ: ಸುಪ್ರಸಿದ್ಧ ಮಾರಿ ಜಾತ್ರೆ (Mari jatra) ಕ್ಷಣಗಣನೆ ಪ್ರಾರಂಭವಾಗಿದೆ. ತಾಲೂಕಿನ ಮುಂಡಳ್ಳಿಯಲ್ಲಿರುವ ಹೊನ್ನಯ್ಯನಮನೆಯಲ್ಲಿ ಮಾರಿಯಮ್ಮನ ಮೂರ್ತಿಯ ಬಿಂಬ(mari bimba) ರಚನೆ ಪೂರ್ಣಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ಮಂಗಳವಾರ ಹೊನ್ನಯ್ಯನಮನೆ ಅವರ ಜಾಗದಲ್ಲಿ ಆಮಟೆ ಮರಕ್ಕೆ ಪೂಜೆ ಸಲ್ಲಿಸಿ ಅಮಟೆ ಮರಕ್ಕೆ ಕಂಪು ಹಾಕಲಾಯಿತು. ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಯ ಮೂರ್ತಿ ಕೆತ್ತನೆಯ ಧಾರ್ಮಿಕ ವಿಧಿ ವಿಧಾನಕ್ಕೆ ಚಾಲನೆ ನೀಡಲಾಗಿತ್ತು. ಶುಕ್ರವಾರದವರೆಗೆ ಮಾರಿ ಮೂರ್ತಿ ಬಿಂಬ(mari bimba) ಅಲ್ಲಿಯೇ ತಯಾರಿಸಿ ಪೂರ್ಣಗೊಳಿಸಲಾಗಿದೆ. ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು. ಊರಿನ ಮುತೈದೆಯರು ಮೂರ್ತಿ ಬಿಂಬಕ್ಕೆ ಉಡಿ ತುಂಬಿದರು. ನಂತರ ಮಾರಿ ಮೂರ್ತಿ ಬಿಂಬವನ್ನು ಮಣ್ಕುಳಿಯ ಆಚಾರ್ಯರ ಮನೆಗೆ ತರಲಾಯಿತು.
Government Hospital/ ಏಕಾಏಕಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ ಸಾರ್ವಜನಿಕರು, ಯಾಕೆ ಗೊತ್ತಾ?
ಶನಿವಾರದಿಂದ ಮೂರ್ತಿ ತಯಾರಿಕೆ ಕೆಲಸ ಮಣ್ಕುಳಿಯ ಆಚಾರ್ಯರ ಮನೆಯಲ್ಲಿ ಆರಂಭಗೊಳ್ಳಲಿದೆ. ಆ ೪ರೊಳಗೆ ಮೂರ್ತಿ ರಚನೆ ಪೂರ್ಣಗೊಳ್ಳಲಿದೆ. ಅಂದು ರಾತ್ರಿ ಆಚಾರ್ಯರ ಮನೆಯಲ್ಲಿರುವ ಗದ್ದುಗೆಮನೆಯಲ್ಲಿ ಪೂಜೆ ನಡೆಯಲಿದೆ. ಮರುದಿನ ನಸುಕಿನ ಜಾವ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡು ಮಾರಿ ಜಾತ್ರೆಗೆ (Mari jatra) ಅದ್ದೂರಿ ಚಾಲನೆ ಸಿಗಲಿದೆ.


