ಭಟ್ಕಳ ಡೈರಿ ವರದಿ

ಭಟ್ಕಳ: ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿ ಎರಡು ಸ್ಕೂಟರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಸೆಪ್ಟೆಂಬರ್ ೧೫ರಂದು ನಡೆದಿದೆ. ಬೈಲೂರು ಸಮೀಪದ ನೀರಗದ್ದೆ ನಿವಾಸಿ ಮಹಾಲಕ್ಷ್ಮಿ ಮಹಾಬಲೇಶ್ವರ ನಾಯ್ಕ (೩೭) ಗಾಯಗೊಂಡ ಮಹಿಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರಿನ ಪ್ರಕಾರ, ಮಹಾಲಕ್ಷ್ಮಿ ಅವರು ತಮ್ಮ ಮಗಳನ್ನು ಸ್ಕೂಟಿಯ ಹಿಂಬದಿ ಕೂರಿಸಿಕೊಂಡು ಮುರ್ಡೇಶ್ವರ ಕಡೆಯಿಂದ ನಾಕೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಾಕೆ ಕಡೆಯಿಂದ ಮುರ್ಡೇಶ್ವರ ಕಡೆಗೆ ಬರುತ್ತಿದ್ದ ಮತ್ತೊಂದು ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮತ್ತೊಂದು ಸ್ಕೂಟಿಯನ್ನು ಬಾಳೆಹಿತ್ಲು, ಹೆಬಳೆ ನಿವಾಸಿ ಕುಮಾರ ಹಣಮಂತ ಮೊಗೇರ (೪೮) ಚಲಾಯಿಸುತ್ತಿದ್ದರು. ಅವರು ಸ್ಕೂಟಿಯನ್ನು ಅತಿವೇಗ ಹಾಗೂ ದುಡುಕಿನಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡೂ ಸ್ಕೂಟರ್‌ಗಳು ರಸ್ತೆಗೆ ಬಿದ್ದಿವೆ ಎಂದು ಆರೋಪಿಸಲಾಗಿದೆ.

 

ಅಪಘಾತದಲ್ಲಿ ಮಹಾಲಕ್ಷ್ಮಿ ಅವರ ಬಾಯಿಯೊಳಗೆ ನೋವು ಉಂಟಾಗಿದ್ದು, ಗದ್ದದ ಭಾಗದಲ್ಲಿ ರಕ್ತಸ್ರಾವವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಅವರ ಸಹೋದರ, ದೊಡ್ಡ ಬಲಸೆ ನಿವಾಸಿ ಮಹಾಬಲೇಶ್ವರ ಸೀತಾರಾಮ ನಾಯ್ಕ ಅವರು ಸೆಪ್ಟೆಂಬರ್ ೧೬ರಂದು ಮಧ್ಯಾಹ್ನ ೧೨.೩೦ಕ್ಕೆ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪದ ಹಿನ್ನೆಲೆಯಲ್ಲಿ ಸ್ಕೂಟಿ ಸವಾರ ಕುಮಾರ ಹಣಮಂತ ಮೊಗೇರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ :

ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದೂರು-ಪ್ರತಿ ದೂರು ದಾಖಲು

ಸೆ ೨೦ರಂದು ಭಟ್ಕಳದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ