ಭಟ್ಕಳ: ತಾಲೂಕು ಸರ್ಕಾರಿ ಆಸ್ಪತ್ರೆಯ (Government Hospital) ವೈದ್ಯಾಧಿಕಾರಿ ಡಾ ಅರುಣಕುಮಾರ ಅವರ ವಿರುದ್ಧ ಕರ್ತವ್ಯ ಲೋಪದ ಆರೋಪವೊಂದನ್ನು ಅನಾಮಧೇಯ ವ್ಯಕ್ತಿಯೊಬ್ಬರು ಮಾಡಿರುವ ಘಟನೆ ಭಟ್ಕಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆರೋಪದ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣವಿಲ್ಲದಿದ್ದರೂ, ಜಿಲ್ಲಾ ಆರೋಗ್ಯ ಅಧಿಕಾರಿಗೆ (DHO) ಡಾ ಅರುಣಕುಮಾರ ಅವರ ವಿರುದ್ಧ ಅನಾಮಧೇಯ ಅರ್ಜಿ ಕಳುಹಿಸಲಾಗಿದೆ ಎನ್ನಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಬೆಳವಣಿಗೆಯನ್ನು ಖಂಡಿಸಿದ ಸಾರ್ವಜನಿಕರು ಭಟ್ಕಳ (Bhatkal) ತಾಲೂಕು ಸರ್ಕಾರಿ ಆಸ್ಪತ್ರೆಗೆ (Government Hospital) ಆಗಮಿಸಿ ವೈದ್ಯಾಧಿಕಾರಿ ಡಾ ಅರುಣಕುಮಾರ ಅವರಿಗೆ ಬೆಂಬಲ ಸೂಚಿಸಿದರು. ಆಧಾರರಹಿತ ಆರೋಪಗಳಿಂದ ಮನೋಸ್ಥೈರ್ಯ ಕುಗ್ಗಿಸಿಕೊಳ್ಳಬಾರದು ಎಂದು ಹೇಳಿದ ಅವರು, ವೈದ್ಯರೊಂದಿಗೆ ನಿಂತು ಧೈರ್ಯ ತುಂಬಿದರು.

Anti-Human Trafficking Day/ ಶಿರಾಲಿಯಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ

ಸಾರ್ವಜನಿಕರು ಮಾತನಾಡಿ, ಡಾ ಅರುಣಕುಮಾರ ಅವರು ಹಲವು ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡಿ ಉತ್ತಮ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಯಾವುದೇ ಆರೋಪ ಮಾಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದರು.

Yoga Guru/ ಭಟ್ಕಳದ ಯೋಗ ಗುರುಗೆ ‘ಭಾರತೀಯ ಯೋಗ ರತ್ನ’ ಪ್ರಶಸ್ತಿ

ವೈದ್ಯರ ಪರವಾಗಿ ಬೆಂಬಲ ವ್ಯಕ್ತಪಡಿಸಿದವರಲ್ಲಿ ನಿವೃತ್ತ ಸೈನಿಕ (retired Soldier) ಶ್ರೀಕಾಂತ ನಾಯ್ಕ, ಮುಖಂಡ ನಾರಾಯಣ ಖಾರ್ವಿ, ಸಾಮಾಜಿಕ ಕಾರ್ಯಕರ್ತ (social activist) ಅಣ್ಣಪ್ಪ ಅಬ್ಬಿಹಿತ್ಲ, ವಿಶ್ವನಾಥ ಮಹಾಲೆ, ಪಾಂಡು ನಾಯ್ಕ ಆಸರಕೇರಿ ಸೇರಿದಂತೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು. ಅನಾಮಧೇಯ ಮತ್ತು ಪರಿಶೀಲಿಸದ ಆರೋಪಗಳಿಗೆ ಮನ್ನಣೆ ನೀಡಬಾರದು ಹಾಗೂ ಯಾವುದೇ ವಿಷಯದಲ್ಲಿ ಸತ್ಯಾಂಶವನ್ನು ಪರಿಶೀಲಿಸಿದ ಬಳಿಕವೇ ಪ್ರತಿಕ್ರಿಯಿಸಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡಿದರು.

passes away/ ಭಟ್ಕಳದ ನಿವೃತ್ತ ಎಎಸ್‌ಐ ನಿಧನ